ADVERTISEMENT

ಫನಿ ಪರಿಣಾಮ: ಒಡಿಶಾದ 11 ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಹಿಂದಕ್ಕೆ

ಏಜೆನ್ಸೀಸ್
Published 1 ಮೇ 2019, 6:47 IST
Last Updated 1 ಮೇ 2019, 6:47 IST
   

ನವದೆಹಲಿ: ಫನಿ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿಡು ಒಡಿಶಾಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ. ಚಂಡಮಾರುತದಸಂಭಾವ್ಯ ಅನಾಹುತಗಳಿಗೆ ಪ್ರತಿಯಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಒಡಿಶಾ ಕರಾವಳಿ ಭಾಗದ 11 ಜಿಲ್ಲೆಗಳಲ್ಲಿ ನೀತಿ ಸಂಹಿತೆಯನ್ನು ಹಿಂದಕ್ಕೆ ಪಡೆದಿದೆ.

ಸದ್ಯ ಫನಿ ಚಂಡಮಾರುತ ಗಂಟೆಗೆ 200 ಕಿ.ಮೀ ವೇಗದಲ್ಲಿ ಒಡಿಶಾ ಸಮೀಪಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.

ಚಂಡಮಾರುತವು ಮಂಗಳವಾರದ ಹೊತ್ತಿಗೆ ತೀವ್ರತೆ ಪಡೆದುಕೊಂಡಿದೆ ಎಂದು ಭಾರತೀಯ ನೌಕಾಪಡೆಯು ಸೋಮವಾರ ರಾತ್ರಿ ತಿಳಿಸಿತ್ತು. ಭಾಗಶಃ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಚಂಡಮಾರುತ ಒಡಿಶಾಕ್ಕೆಅಪ್ಪಳಿಸುವ ಸಾಧ್ಯತೆಗಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.