ADVERTISEMENT

ತಮಿಳುನಾಡು ಕರಾವಳಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತ, ಭಾರಿ ಮಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2024, 4:54 IST
Last Updated 1 ಡಿಸೆಂಬರ್ 2024, 4:54 IST
<div class="paragraphs"><p>ಚಂಡಮಾರುತ ತಮಿಳುನಾಡು ಕರಾವಳಿಗೆ ಅಪ್ಪಳಿಸಿದ್ದರಿಂದ ಭಾರಿ ಮಳೆಯಾಗುತ್ತಿದೆ</p></div>

ಚಂಡಮಾರುತ ತಮಿಳುನಾಡು ಕರಾವಳಿಗೆ ಅಪ್ಪಳಿಸಿದ್ದರಿಂದ ಭಾರಿ ಮಳೆಯಾಗುತ್ತಿದೆ

   

ಚೆನ್ನೈ: ಫೆಂಗಲ್ ಚಂಡಮಾರುತವು ಭಾನುವಾರ ಬೆಳಿಗ್ಗೆ ತಮಿಳುನಾಡಿನ ಉತ್ತರ ಕರಾವಳಿ ಮತ್ತು ಪುದುಚೇರಿ ಕರಾವಳಿ ಮೂಲಕ ಹಾದುಹೋಗುತ್ತಿದ್ದು, ಈ ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಇತ್ತೀಚಿನ ವರದಿ ಪ್ರಕಾರ, ಫೆಂಗಲ್ ಚಂಡಮಾರುತವು ಪಶ್ಚಿಮ ನೈರುತ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯನ್ನು ಕಾರೈಕಾಲ್ ಮತ್ತು ಮಹಾಬಲಿಪುರಂ ನಡುವೆ, ಪುದುಚೇರಿಯ ಬಳಿ ಗಂಟೆಗೆ 70-80 ಕಿಮೀ ವೇಗದಲ್ಲಿ ಹಾದುಹೋಗುವ ನಿರೀಕ್ಷೆಯಿದೆ. ಮುಂದೆ ಗಂಟೆಗೆ 90 ಕಿ.ಮೀ ವರೆಗೆ ತಲುಪಬಹುದು ಎಂದು ವರದಿ ತಿಳಿಸಿದೆ.

ADVERTISEMENT

ಕರಾವಳಿಗೆ ಅಪ್ಪಳಿಸಿದ ಬಳಿಕ ಮುಂದಿನ ಆರು ಗಂಟೆಗಳಲ್ಲಿ ದುರ್ಬಲಗೊಳ್ಳುತ್ತದೆ ಎಂದು ಅದು ತಿಳಿಸಿದೆ.

ಈ ಮಧ್ಯೆ, ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಸಮೀಪದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಚೆಂಗಲ್ಪಟ್ಟು ಜಿಲ್ಲೆಯ ಕಲ್ಪಾಕ್ಕಂ ಬಳಿಯ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ನೈರುತ್ಯ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತವು ಕಳೆದ 6 ಗಂಟೆಗಳಿಂದ ಕಡಿಮೆ ವೇಗದಲ್ಲಿ ಚಲಿಸಿದೆ. ಮಹಾಬಲಿಪುರದಿಂದ 50 ಕಿಮೀ, ಪುದುಚೇರಿಯ ಪೂರ್ವ ಈಶಾನ್ಯಕ್ಕೆ 60 ಕಿಮೀ ಮತ್ತು ಚೆನ್ನೈನಿಂದ 90 ಕಿಮೀ ದೂರದಲ್ಲಿ ಚಂಡಮಾರತ ನೆಲೆಗೊಂಡಿತ್ತು ಎಂದು ಐಎಂಡಿ ತಿಳಿಸಿದೆ.

ಚಂಡಮಾರುತದ ಹಿನ್ನೆಲೆ ತಮಿಳುನಾಡು ಮತ್ತು ಪುದುಚೇರಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ವಾರ್ ರೂಮ್ ಕಾರ್ಯಾಚರಣೆ, ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.

ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತಿದ್ದು, ತಮಿಳುನಾಡಿನ 4000 ಸರ್ಕಾರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್ಪಟ್ಟು ಮತ್ತು ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸ್ಥಿತಿಗತಿಗಳ ಮೌಲ್ಯಮಾಪನ ನಡೆಸಿಸಿದ್ದಾರೆ. ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅಗತ್ಯ ಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ಅವರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.