ADVERTISEMENT

ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತ ಸೃಷ್ಟಿಸಿದ ಆತಂಕ: ವಿಡಿಯೊಗಳಲ್ಲಿ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2023, 6:14 IST
Last Updated 5 ಡಿಸೆಂಬರ್ 2023, 6:14 IST
<div class="paragraphs"><p>ಚೆನ್ನೈಯಲ್ಲಿ ಭಾರಿ ಮಳೆ</p></div>

ಚೆನ್ನೈಯಲ್ಲಿ ಭಾರಿ ಮಳೆ

   

(ಪಿಟಿಐ ಚಿತ್ರ)

ಚೆನ್ನೈ: ಮಿಚಾಂಗ್ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ಭಾರಿ ಹಾನಿ ಸಂಭವಿಸಿದೆ.

ADVERTISEMENT

ಧಾರಾಕಾರ ಮಳೆ, ಗಾಳಿಯಿಂದ ಸಂಭವಿಸಿದ ಅವಘಡಗಳಲ್ಲಿ ಈವರೆಗೆ ಎಂಟು ಮಂದಿ ಮೃತಪಟ್ಟಿದ್ದಾರೆ. ಚೆನ್ನೈ ವಿಮಾನ ನಿಲ್ದಾಣ, ನಗರ ಪ್ರದೇಶ ಸೇರಿದಂತೆ ಹಲವೆಡೆ ಜಲಾವೃತಗೊಂಡಿದೆ.

ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ತಮಿಳುನಾಡಿನಲ್ಲಿ ಮಳೆ ಬಿರುಸು ಇಂದು ತುಸು ತಗ್ಗಿದೆ. ಆದರೂ ನೀರು ನಿಂತಿರುವುದು ತೊಂದರೆಗೆ ಕಾರಣವಾಗಿದೆ. ಚಂಡಮಾರುತ ಇಂದು ಆಂಧ್ರಪ್ರದೇಶದ ತೀರ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಿದೆ.

ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತ ಸೃಷ್ಟಿಸಿದ ಆತಂಕ: ವಿಡಿಯೊಗಳಲ್ಲಿ ನೋಡಿ

ಪ್ರತಿ ವರ್ಷವೂ ಇದೇ ಸಮಸ್ಯೆ, ಶಾಶ್ವತ ಪರಿಹಾರ ಅಗತ್ಯ: ನಾಗರಿಕರ ಆಕ್ರೋಶ

ಚೆನ್ನೈಯ ತಾಂಬರಂ ಸಿಟಿಒ ಕಾಲನಿಯಲ್ಲಿ ಬೋಟ್‌ನಲ್ಲಿ ಪಯಣ

ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ

ಹಲವೆಡೆ ಪ್ರವಾಹದ ಸ್ಥಿತಿ

ಪ್ರಾಣಿಗಳಿಗೂ ಪ್ರವಾಹ ಸಂಕಷ್ಟ

ಕಟ್ಟಡದಲ್ಲಿ ರಕ್ಷಣೆ ಪಡೆದ ನಾಗರಿಕರು

ಉಕ್ಕಿ ಹರಿಯುತ್ತಿರುವ ಕೂವಂ ನದಿ

ತುಸು ತಗ್ಗಿದ ಮಳೆಯ ಬಿರುಸು

ಚೆನ್ನೈಯಲ್ಲಿ ಮುಂದುವರಿದ ಪ್ರವಾಹದ ಸ್ಥಿತಿ

ಮಿಂಚಾಗ್ ಚಂಡಮಾರುತ ಪ್ರಭಾವ: ಆಂಧ್ರಪ್ರದೇಶದಲ್ಲಿ ಭಾರಿ ಮಳೆ

ಆಂಧ್ರಪ್ರದೇಶದಲ್ಲಿ ಭಾರಿ ಗಾಳಿ, ಮಳೆ

ಆಂಧ್ರ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ ಚಂಡಮಾರುತ

ಮಚಲಿಪಟ್ಟಣಂ ಸೇರಿದಂತೆ ಹಲವೆಡೆ ಮಳೆ

ಆಂಧ್ರಪ್ರದೇಶದಲ್ಲಿ ಮುನ್ನೆಚ್ಚರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.