ADVERTISEMENT

₹4,274 ಕೋಟಿ ಮೊತ್ತದ ರಕ್ಷಣಾ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 19:30 IST
Last Updated 10 ಜನವರಿ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಉತ್ತರ ಭಾಗದಲ್ಲಿ ದೇಶದ ರಕ್ಷಣಾ ಬಲವನ್ನು ವೃದ್ಧಿಸುವ ಉದ್ದೇಶದಿಂದ ಸ್ವದೇಶಿ ನಿರ್ಮಿತ ವಾಯುದಾಳಿ ತಡೆ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ರಕ್ಷಣಾ ಸಚಿವಾಲಯ ಮಂಗಳವಾರ ನಿರ್ಧರಿಸಿದೆ.

ಲಡಾಖ್ ಹಾಗೂ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾದ ಜತೆ ಉದ್ವಿಗ್ನತೆ ಉಂಟಾಗಿರುವ ಸಮಯದಲ್ಲಿ ಭಾರತ ಈ ನಿರ್ಧಾರ ತೆಗೆದುಕೊಂಡಿದೆ.

ಶಿವಾಲಿಕ್ ಶ್ರೇಣಿಯ ನೌಕೆಗೆ ಅಳವಡಿಸುವ ಬ್ರಹ್ಮೋಸ್ ಲಾಂಚರ್‌, ಅಗ್ನಿ ನಿಯಂತ್ರಣ ವ್ಯವಸ್ಥೆ ಮತ್ತು ಮುಂದಿನ ತಲೆಮಾರಿನ ತಂತ್ರಜ್ಞಾನ ಅಳವಡಿಸಿರುವ ಕ್ಷಿಪಣಿಗಳ ಖರೀದಿಗೂ ಒಪ್ಪಿಗೆ ನೀಡಲಾಗಿದೆ. ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಬಲ್ಲ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಟ್ಯಾಂಕ್ ನಿರೋಧಕ ‘ಹೆಲಿನಾ’ ಕ್ಷಿಪಣಿಯನ್ನು ಸೇನಾಪಡೆಗಾಗಿ ಖರೀದಿಸಲೂ ಇದೇ ವೇಳೆ ಅನುಮೋದನೆ ಸಿಕ್ಕಿದೆ.

ADVERTISEMENT

ಈ ಮೂರು ಖರೀದಿ ಪ್ರಕ್ರಿಯೆಗೆ ₹4,274 ಕೋಟಿ ವೆಚ್ಚವಾಗಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿಯು (ಡಿಎಸಿ) ಅನುಮೋದನೆ ನೀಡಿದೆ.

ಇನ್‌ಫ್ರಾರೆಡ್ ತಂತ್ರಜ್ಞಾನದ, ಅತಿ ಕಡಿಮೆ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆಯನ್ನು (ವಿಎಸ್‌ಎಚ್‌ಒಆರ್‌ಎಡಿ) ಮೂರು ತಿಂಗಳ ಹಿಂದೆ ಚಾಂಡಿಪುರದಲ್ಲಿ ಡಿಆರ್‌ಡಿಒ ಪರೀಕ್ಷೆಗೆ ಒಳಪಡಿಸಿತ್ತು. ಹೆಲಿನಾ ಕ್ಷಿಪಣಿಯು ಮೂರನೇ ತಲೆಮಾರಿನ ತಂತ್ರಜ್ಞಾನದಿಂದ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.