ನವದೆಹಲಿ: ‘ಮುಂದಿನ ದಲೈ ಲಾಮಾ ಸ್ವತಂತ್ರ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದಿಂದ ಬರುತ್ತಾರೆಯೇ ಹೊರತು ಚೀನಾದಿಂದ ಬರುವುದಿಲ್ಲ’ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಹೇಳಿದ್ದಾರೆ.
‘14ನೇ ದಲೈ ಲಾಮಾ ಅವರ ಆರೋಗ್ಯವು ತುಂಬಾ ಚೆನ್ನಾಗಿದೆ. 130 ವರ್ಷಗಳ ಕಾಲ ಬದುಕುವುದಾಗಿ ಅವರೇ ಹೇಳಿದ್ದಾರೆ. ಅಷ್ಟು ಕಾಲ ಅವರು ಬದುಕುತ್ತಾರೆ ಎಂಬ ಭರವಸೆಯಿದೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.
’ಮುಂದಿನ ದಲೈ ಲಾಮಾ ಅವರನ್ನು ಹೇಗೆ ಆಯ್ಕೆ ಮಾಡುತ್ತಾರೆ, ಅವರು ಎಲ್ಲಿ ಹುಟ್ಟುತ್ತಾರೆ, ಯಾವ ಪ್ರದೇಶದಲ್ಲಿ ಹುಟ್ಟುತ್ತಾರೆ, ಭಾರತದಲ್ಲಿ ಅಥವಾ ಟಿಬೆಟ್‌ನಲ್ಲಿಯೇ ಎಂದು ಊಹಿಸುವುದು ಅಸಾಧ್ಯ. ಮುಂದಿನ ದಲೈ ಲಾಮಾ ಸ್ವತಂತ್ರ ಜಗತ್ತಿನಲ್ಲಿ ಹುಟ್ಟುತ್ತಾರೆ ಎಂದು ಪರಮಪೂಜ್ಯರು(14ನೇ ದಲೈ ಲಾಮಾ) ಹೇಳಿದ್ದಾರೆ. ಹಾಗೆಯೇ ಆಗಲಿದೆ’ ಎಂದಿದ್ದಾರೆ
‘ಮುಂದಿನ ದಲೈ ಲಾಮಾ ಚೀನಾದವರು ಆಗಿರುವುದಿಲ್ಲ. ಯಾಕೆಂದರೆ ಅದು ಪ್ರಜಾಪ್ರಭುತ್ವ ರಾಷ್ಟ್ರವಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.