ಜಗಜಿತ್ ಸಿಂಗ್ ದಲ್ಲೇವಾಲ್
ಪಿಟಿಐ ಸಂಗ್ರಹ ಚಿತ್ರ
ಚಂಡೀಗಢ: ‘ಪಂಜಾಬ್‌ನ ರೈತ ಮುಖಂಡ ಜಗಜೀತ್ ಸಿಂಗ್ ಡಲ್ಲೇವಾಲ್ ಅವರು ಅನಿರ್ದಿಷ್ಟಾವಧಿ ಮುಷ್ಕರವನ್ನು ಅಂತ್ಯಗೊಳಿಸಿಲ್ಲ’ ಎಂದು ಅವರ ನಿಕಟವರ್ತಿ, ರೈತ ನಾಯಕ ಅಭಿಮನ್ಯು ಕೊಹಾರ್ ಶನಿವಾರ ತಿಳಿಸಿದ್ದಾರೆ.
‘ರಾಜ್ಯದ ಪೊಲೀಸರು ಕಳೆದ ವಾರ ಬಂಧಿಸಿದ್ದ ಎಲ್ಲ ರೈತರನ್ನು ವಿವಿಧ ಜೈಲುಗಳಿಂದ ಬಿಡುಗಡೆ ಮಾಡಿದ ಬಳಿಕ ಅವರು ಒಂದು ಲೋಟ ನೀರನ್ನು ಕುಡಿದಿದ್ದಾರೆ. ರೈತರ ಬಿಡುಗಡೆ ಬಳಿಕ ನೀರನ್ನಷ್ಟೇ ಕುಡಿಯುತ್ತೇನೆ ಎಂದು ಅವರು ಮೊದಲೇ ತಿಳಿಸಿದ್ದರು’ ಎಂದು ಹೇಳಿದರು.
‘ಅನಿರ್ದಿಷ್ಟಾವಧಿ ಮುಷ್ಕರವನ್ನು ಡಲ್ಲೇವಾಲ್ ಅವರು ಅಂತ್ಯಗೊಳಿಸಿದ್ದಾರೆ ಎಂದು ತಪ್ಪು ಅಭಿಪ್ರಾಯವನ್ನು ಮೂಡಿಸಲಾಗುತ್ತಿದೆ. ಇದು, ಸರಿಯಲ್ಲ. ಅವರು ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ’ ಎಂದು ಹೇಳಿದರು.
ಹರಿಯಾಣದ ಖನೌರಿ ಮತ್ತು ಶಂಬು ಗಡಿಯಲ್ಲಿ ನಿರಶನ ನಡೆಸುತ್ತಿದ್ದ ರೈತರು ಮಾರ್ಚ್ 19ರಂದು ಸ್ಥಳದಿಂದ ನಿರ್ಗಮಿಸಿದ್ದಾರೆ. ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಪಂಜಾಬ್‌ನ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.