ADVERTISEMENT

ನಿರ್ಭಯ ಪ್ರಕರಣಕ್ಕೆ ದಶಕ: ಒಂದು ದಿನದ ಅಧಿವೇಶನಕ್ಕೆ ಬೇಡಿಕೆ

ಪಿಟಿಐ
Published 16 ಡಿಸೆಂಬರ್ 2022, 12:24 IST
Last Updated 16 ಡಿಸೆಂಬರ್ 2022, 12:24 IST
ಸ್ವಾತಿ ಮಾಲೀವಾಲ್‌
ಸ್ವಾತಿ ಮಾಲೀವಾಲ್‌   

ನವದೆಹಲಿ: ‘ದೆಹಲಿಯ ನಿರ್ಭಯಾ ಪ್ರಕರಣಕ್ಕೆ 10 ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಸಂಸತ್‌ ಅಧಿವೇಶನದ ಒಂದು ದಿನವನ್ನು ಮಹಿಳೆಯರ ಸುರಕ್ಷತೆಯ ವಿಷಯಗಳ ಚರ್ಚೆಗಳಿಗಾಗಿ ಮೀಸಲಿಡಬೇಕು’ ಎಂದು ಕೋರಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್‌ ಅವರು ಲೋಕಸಭೆ ಸ್ಪೀಕರ್‌ ಹಾಗೂ ರಾಜ್ಯಸಭೆ ಸಭಾಪತಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

‘ಮಹಿಳೆಯ ಮೇಲಿನ ದೌರ್ಜನ್ಯವು ‘ಸಾಂಕ್ರಾಮಿಕ’ ಎಂಬಂತಹ ಸ್ಥಿತಿಗೆ ತಲುಪಿದೆ. ದೆಹಲಿಯಲ್ಲಿ ಪ್ರತಿ ದಿನ ಆರು ಅತ್ಯಾಚಾರದ ಪ್ರಕರಣಗಳು ನಡೆಯುತ್ತಿವೆ’ ಎಂದು ಅವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

‘ನಿರ್ಭಯಾ ನಿಧಿಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ವಿಫಲವಾಗಿದೆ. ಆದ್ದರಿಂದ ಈ ಕುರಿತು ಅಧಿವೇಶನದ ಒಂದು ದಿನವನ್ನು ಮೀಸಲಿಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.