ADVERTISEMENT

ಶಾರುಕ್‌ ಖಾನ್ ಲುಕ್‌ಗೆ ದೀಪಿಕಾ ಪಡುಕೋಣೆ ಫಿದಾ

ಐಎಎನ್ಎಸ್
Published 1 ಏಪ್ರಿಲ್ 2023, 12:50 IST
Last Updated 1 ಏಪ್ರಿಲ್ 2023, 12:50 IST
ಶಾರುಕ್‌ ಖಾನ್
ಶಾರುಕ್‌ ಖಾನ್   

ಮುಂಬೈ: ನೀತಾ ಮುಖೇಶ್ ಅಂಬಾನಿ ಅವರ ಜಿಯೋ ಜಾಗತಿಕ ಕೇಂದ್ರ ಉದ್ಟಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್‌ ಖಾನ್ ಅವರ ಲುಕ್‌ಗೆ ಬಾಲಿವುಡ್‌ ಮುಂದಿ ಫಿದಾ ಆಗಿದ್ದಾರೆ.

ಕಪ್ಪು ಬಣ್ಣದ ವಸ್ತ್ರ ಧರಿಸಿದ್ದ ಶಾರುಕ್‌, ಪತ್ನಿ ಗೌರಿ ಖಾನ್, ಪುತ್ರಿ ಸುಹಾನಾ ಖಾನ್ ಮತ್ತು ಪುತ್ರ ಆರ್ಯನ್ ಖಾನ್ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಾರುಕ್‌ ಅವರ ಚಿತ್ರವನ್ನು ಹಂಚಿಕೊಂಡಿರುವ ಸ್ಟೈಲಿಸ್ಟ್‌ ಶಾಲಿನಾ ನಥಾನಿ, ‘ಡೆಡ್’ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ನಟಿ ದೀಪಿಕಾ ಪಡುಕೋಣೆ 'ಮೀ ಟೂ (ನಾನು ಕೂಡ)' ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಈ ವರ್ಷದಲ್ಲಿ ಉತ್ತಮ ಪ್ರದರ್ಶನ ಕಂಡ 'ಪಠಾಣ್‌' ಚಿತ್ರದಲ್ಲಿ ದೀಪಿಕಾ ಮತ್ತು ಶಾರುಕ್‌ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಸಹ ನಟಿಸಿದ್ದಾರೆ.

ಶಾರುಖ್ ಖಾನ್ ಅವರು 'ಜವಾನ್' ಮತ್ತು 'ಡುಂಕಿ' ಚಿತ್ರಗಳಲ್ಲಿ ನಟಿಸಲಿದ್ದಾರೆ. ದೀಪಿಕಾ 'ಫೈಟರ್' ಚಿತ್ರದಲ್ಲಿ ಹೃತಿಕ್ ರೋಷನ್ ಜತೆಗೆ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.