ದೆಹಲಿಯಲ್ಲಿ ಕಳಪೆ ಮಟ್ಟಕ್ಕೆ ಕುಸಿದ ಗಾಳಿಯ ಗುಣಮಟ್ಟ
ಪಿಟಿಐ ಚಿತ್ರ
ನವದೆಹಲಿ: ದೀಪಾವಳಿ ಪ್ರಯುಕ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಡಿಸಿದ ಪಟಾಕಿ ಪರಿಣಾಮ ಮಂಗಳವಾರ ಗಾಳಿಯ ಗುಣಮಟ್ಟ ಕಳಪೆ ಹಂತಕ್ಕೆ ಕುಸಿತಗೊಂಡಿದ್ದು, ಹೊಗೆಯಿಂದ ಆವೃತವಾದ ವಾತಾವರಣ ಕಂಡುಬಂದಿದೆ.
ಸುಪ್ರೀಂ ಕೋರ್ಟ್ ಪಟಾಕಿ ಸಿಡಿಸಲು 2 ಗಂಟೆಗಳ ಅವಕಾಶ ನೀಡಿತ್ತು. ಆದರೆ ಅದನ್ನು ಮೀರಿ ಜನರು ಪಟಾಕಿ ಸಿಡಿಸಿದ ಪರಿಣಾಮ ಗಾಳಿಯ ಗುಣಮಟ್ಟ ರೆಡ್ ಝೋನ್‌ಗೆ ತಲುಪಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣದ ಮಾಹಿತಿ ಪ್ರಕಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬೆಳಿಗ್ಗೆ 8 ಗಂಟೆಗೆ 352ಕ್ಕೆ ಇಳಿಕೆಯಾಗಿದೆ. ಬೆಳಿಗ್ಗೆ 5 ಗಂಟೆಗೆ 346, ಬೆಳಿಗ್ಗೆ 6 ಗಂಟೆಗೆ 347 ಮತ್ತು ಬೆಳಿಗ್ಗೆ 7 ಗಂಟೆಗೆ 351 ಆಗಿತ್ತು.
0 ಮತ್ತು 50 ರ ನಡುವಿನ ಎಕ್ಯೂಐ ಉತ್ತಮ, 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತಿ ಕಳಪೆ ಮತ್ತು 401 ಮತ್ತು 500 ಗಂಭೀರ ಎಂದು ಪರಿಗಣಿಸಲಾಗುತ್ತದೆ.
ನಗರದಲ್ಲಿ ಅಳವಡಿಸಲಾದ 38 ಮೇಲ್ವಿಚಾರಣಾ ಕೇಂದ್ರಗಳಲ್ಲಿ ಸೋಮವಾರ 36ರಲ್ಲಿ ಗಾಳಿಯ ಗುಣಮಟ್ಟ ಮಟ್ಟ ತೀವ್ರ ಕಳಪೆ ಎಂದು ದಾಖಲಾಗಿದೆ. ಮಂಗಳವಾರ ಮತ್ತು ಬುಧವಾರ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಗೆ ಕುಸಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.