ನವದೆಹಲಿ: ದೇಶದ ರಾಜಧಾನಿ ನವದೆಹಲಿಯ ವಾಯುಮಾಲಿನ್ಯ ಮತ್ತಷ್ಟು ತೀವ್ರಗೊಂಡಿದೆ. ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) 419ಕ್ಕೆ ಇಳಿದಿದ್ದು, ಅತ್ಯಂತ ಅಪಾಯಕಾರಿಯಾಗಿದೆ. ಕನಿಷ್ಠ ತಾಪಮಾನವು ಈ ಋತುವಿನ ಸರಾಸರಿಗಿಂತ ಹೆಚ್ಚಾಗಿ 13.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಭೂ ವಿಜ್ಞಾನ ಸಚಿವಾಲಯ ಮತ್ತು ವಾಯು ಗುಣಮಟ್ಟ ಮೇಲ್ವಿಚಾರಣೆಯ ಸಂಸ್ಥೆ ಸಫರ್ (SAFAR) ಪ್ರಕಾರ, ಉತ್ತಮ ಗಾಳಿಯ ವೇಗದಿಂದಾಗಿ ಶುಕ್ರವಾರದಿಂದ ಗಾಳಿಯ ಗುಣಮಟ್ಟ ಸುಧಾರಿಸುವ ಸಾಧ್ಯತೆ ಇದೆ.
‘ಡಿಸೆಂಬರ್ 3 ರಿಂದ, ಗಾಳಿಯ ವೇಗ ಹೆಚ್ಚುವ ಮೂಲಕ ಧೂಳು ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ, ಎಕ್ಯುಐ(ವಾಯು ಗುಣಮಟ್ಟ ಸೂಚ್ಯಂಕ) ಅತ್ಯಂತ ಕಳಪೆ ವಿಭಾಗದಲ್ಲೇ ಉಳಿಯುವ ಸಾಧ್ಯತೆ ಇದೆ ಸಫರ್ ಸಂಸ್ಥೆ ಹೇಳಿದೆ.
ಬುಧವಾರ ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) 370 ಆಗಿದ್ದು, ಮಂಗಳವಾರ ಇದು 328ರಷ್ಟಿತ್ತು.
ಎನ್‌ಸಿಆರ್ ವಲಯದ ಫರಿದಾ ಬಾದ್(441), ನೊಯ್ದಾ(404)ದಲ್ಲೂ ಗುರುವಾರ ಬೆಳಗ್ಗೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲೇ ಇತ್ತು. ಗಾಜಿಯಾಬಾದ್(359), ಗ್ರೇಟರ್ ನೊಯ್ಡಾ(381), ಗುರುಗ್ರಾಮ್(361) ನಗರಗಳ ವಾಯು ಗುಣಮಟ್ಟವೂ ಅತ್ಯಂತ ಕಳಪೆಯಾಗಿದೆ.
ಶೂನ್ಯದಿಂದ 50ರವರೆಗಿನ ವಾಯು ಗುಣಮಟ್ಟ ಸೂಚ್ಯಂಕವನ್ನು ಆರೋಗ್ಯಕ್ಕೆ ಉತ್ತಮ, 51 ರಿಂದ 100ರವರೆಗೆ ತೃಪ್ತಿಕರ, 101 ರಿಂದ 200ರವರೆಗೆ ಸಾಮಾನ್ಯ, 201ರಿಂದ 300ರವರೆಗೆ ಕಳಪೆ, 400ಕ್ಕೆ ಕಳಪೆ, 401ರಿಂದ 500ರವರೆಗಿನ ವಾಯು ಗುಣಮಟ್ಟ ಸೂಚ್ಯಂಕವನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಇಂದು ನಗರದಲ್ಲಿ ಅಲ್ಪ ಪ್ರಮಣದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.