ADVERTISEMENT

Delhi Blast | ಆತ್ಮಾಹುತಿ ದಾಳಿ ‘ಹುತಾತ್ಮ ಕಾರ್ಯಾಚರಣೆ‘: ಉಮರ್ ವಿಡಿಯೊ ಬಹಿರಂಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2025, 9:58 IST
Last Updated 18 ನವೆಂಬರ್ 2025, 9:58 IST
<div class="paragraphs"><p>ಡಾ. ಉಮರ್ ನಬಿ</p></div>

ಡಾ. ಉಮರ್ ನಬಿ

   

– ಎಕ್ಸ್ ಚಿತ್ರ

ದೆಹಲಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಡಾ. ಉಮರ್ ನಬಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡು ಮಾಡಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಂಪು ಕೋಟೆಯ ಸಮೀಪ ನವೆಂಬರ್ 10 ರಂದು ಕಾರಿನಲ್ಲಿ ಸ್ಫೋಟಕ ಇರಿಸಿಕೊಂಡು ಈತ ಆತ್ಮಾಹುತಿ ದಾಳಿ ಎಸಗಿದ್ದ. ಘಟನೆಯಲ್ಲಿ 15 ಮಂದಿ ಸಾವಿಗೀಡಾಗಿದ್ದರು.

ADVERTISEMENT

ಕೃತ್ಯ ಎಸಗುವುದಕ್ಕೂ ಮುನ್ನ ಅದನ್ನು ಸಮರ್ಥಿಸಿಕೊಂಡು ಈ ವಿಡಿಯೊ ಮಾಡಿದ್ದು, ಆತ್ಮಾಹುತಿ ದಾಳಿಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವನು ಅದರಲ್ಲಿ ಹೇಳಿದ್ದಾನೆ. ‘ಆತ್ಮಾಹುತಿ ದಾಳಿ ಇಸ್ಲಾಮಿನಲ್ಲಿ ಹುತಾತ್ಮ ಕಾರ್ಯಾಚರಣೆ’ ಎಂದು ಆತ ಹೇಳಿದ್ದಾನೆ.

‘ಆತ್ಮಾಹುತಿ ದಾಳಿಯ ಬಗ್ಗೆ ಹಲವು ವಾದಗಳು ಹಾಗೂ ಪ್ರತಿರೋಧಗಳು ಇವೆ. ತಾನು ನಿರ್ದಿಷ್ಟ ಸ್ಥಳದಲ್ಲಿ, ಸಮಯದಲ್ಲಿ ಖಂಡಿತವಾಗಿಯೂ ಸಾಯುತ್ತೇನೆ ಎಂದು ಓರ್ವ ವ್ಯಕ್ತಿ ಅಂದುಕೊಳ್ಳುವುದೇ ಹುತಾತ್ಮ ಕಾರ್ಯಾಚರಣೆ. ನಿರ್ದಿಷ್ಟ ವ್ಯಕ್ತಿ ಸಾಯುತ್ತೇನೆ ಎನ್ನುವ ಊಹೆಗೆ ವಿರುದ್ಧವಾಗಿ ಅವನು ಹೋಗುತ್ತಾನೆ. ಅವನು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಸಾಯುತ್ತಾನೆ. ಆದರೆ ನಮಗೆ ನಿರ್ದಿಷ್ಟ ಸನ್ನಿವೇಶಗಳಿಲ್ಲ’ ಎಂದು ಆತ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಯಾರೀ ಉಮರ್?

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಕೊಲಿ ಗ್ರಾಮದವನಾದ ಈತ, ದೆಹಲಿಯಲ್ಲಿ ಕೆಂಪು ಕೋಟೆ ಸಮೀಪ ನಡೆದ ಸ್ಫೋಟಕ್ಕೆ ಬಳಸಲಾದ ಕಾರನ್ನು ಚಲಾಯಿಸುತ್ತಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.