ನವದೆಹಲಿ: ಮುಂಬರುವ ತಿಂಗಳಲ್ಲಿ ಸಿನಿಮಾ ಮಂದಿರಗಳು ಪುನರಾರಂಭವಾಗುವ ನಿರೀಕ್ಷೆ ಇದೆ ಎಂದು ಪಿವಿಆರ್ ಸಿನಿಮಾದ ಸಿಇಒ ಜಿ. ದತ್ತ ತಿಳಿಸಿದ್ದಾರೆ.
ಚಿತ್ರಮಂದಿರಗಳನ್ನು ಆರಂಭ ಮಾಡಲು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ಮಂದಿರಗಳ ಪುನರಾರಂಭಕ್ಕೆ ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ದತ್ತ ತಿಳಿಸಿದ್ದಾರೆ.
ಈಗಾಗಲೇ ಪೇಪರ್ ಟಿಕೆಟ್‌ಗಳನ್ನು ರದ್ದು ಮಾಡಲಾಗಿದೆ, ಸ್ಯಾನಿಟೇಶನ್ ಮಾಡುವುದು ಸೇರಿದಂತೆ ವೀಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ದತ್ತ ಮಾಹಿತಿ ನೀಡಿದರು.
ವೀಕ್ಷಕರು ಸಿನಿಮಾ ಮಂದಿರದ ಒಳಗೆ ಬರುವಾಗ, ವಿರಾಮದ ಸಂದರ್ಭ ಹಾಗೂ ಸಿನಿಮಾ ಮುಗಿದ ಬಳಿಕ ಜನಸಂದಣಿಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ರೂಪಿಸಲಾಗಿದೆ ಎಂದು ದತ್ತ ಹೇಳಿದ್ದಾರೆ.
ಕೊರೊನಾ ವೈರಸ್ ಪರಿಣಾಮಕಳೆದ ಮಾರ್ಚ್ 27ರಿಂದ ದೇಶದಾದ್ಯಂತ ಸಿನಿಮಾ ಮಂದಿರಗಳನ್ನು ಬಂದ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.