
ಪಿಟಿಐ
ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಮತ್ತು ಕಡಿಮೆ ಗೋಚರತೆಯ ಪರಿಸ್ಥಿತಿಯಿಂದಾಗಿ ಕನಿಷ್ಠ 148 ವಿಮಾನಗಳ ಹಾರಾಟ ರದ್ದಾಗಿದ್ದು, 150 ವಿಮಾನಗಳು ವಿಳಂಬವಾಗಿವೆ.
ನಿಲ್ದಾಣಕ್ಕೆ ಆಗಮಿಸುವ 78 ವಿಮಾನಗಳು ಹಾಗೂ ನಿರ್ಗಮಿಸುವ 70 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
‘ವಿಮಾನ ನಿಲ್ದಾಣದಲ್ಲಿ ಗೋಚರತೆ ಪ್ರಮಾಣವು ಸುಧಾರಿಸುತ್ತಿದೆ. ಆದರೂ ಕೆಲ ವಿಮಾನಗಳ ಮೇಲೆ ಕಡಿಮೆ ಗೋಚರತೆಯು ಪರಿಣಾಮ ಬೀರಿದೆ. ಪ್ರಯಾಣಿಕರಿಗೆ ಸಹಾಯ ಮಾಡಲು ಮತ್ತು ಟರ್ಮಿನಲ್‌ಗಳಲ್ಲಿ ಅಗತ್ಯ ಬೆಂಬಲ ನೀಡುವಲ್ಲಿ ನಿಲ್ದಾಣದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ’ ಎಂದು ನಿಲ್ದಾಣದ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.