ADVERTISEMENT

ದೆಹಲಿ: 50 ಕಡೆ ಸ್ಪೋಕನ್‌ ಇಂಗ್ಲಿಷ್‌ ಕೋರ್ಸ್‌ ಕೇಂದ್ರ- ಕೇಜ್ರಿವಾಲ್‌

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೊಷಣೆ

ಪಿಟಿಐ
Published 23 ಜುಲೈ 2022, 14:32 IST
Last Updated 23 ಜುಲೈ 2022, 14:32 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ –ಪಿಟಿಐ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ –ಪಿಟಿಐ   

ನವದೆಹಲಿ: ದೆಹಲಿಯಾದ್ಯಂತ 50 ಕೇಂದ್ರಗಳಲ್ಲಿ ಸ್ಪೋಕನ್‌ ಇಂಗ್ಲಿಷ್‌ ಕೋರ್ಸ್‌ ಆರಂಭಿಸುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶನಿವಾರ ಘೋಷಿಸಿದ್ದಾರೆ.

ಆನ್‌ಲೈನ್‌ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 12ನೇ ತರಗತಿ ಪೂರ್ಣಗೊಳಿಸಿರುವ 18–35 ವರ್ಷ ವಯೋಮಾನದವರುಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಮೊದಲ ಹಂತದಲ್ಲಿ 1 ಲಕ್ಷ ಮಕ್ಕಳನ್ನು ದಾಖಲಿಸಿಕೊಂಡು, ಅವರ ಇಂಗ್ಲಿಷ್‌ ಸಂವಹನ ಕೌಶಲವನ್ನು ವೃದ್ಧಿಸಲಾಗುತ್ತದೆ ಎಂದರು.

ಈ ಕೋರ್ಸ್‌ಗೆ ದಾಖಲಾಗಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಆದರೆ ಭದ್ರತಾ ಠೇವಣಿಯಾಗಿ ಮೊದಲಿಗೆ ₹950 ಪಾವತಿಸಬೇಕು. ಪೂರ್ಣ ಹಾಜರಾತಿಯೊಂದಿಗೆ ಕೋರ್ಸ್‌ ಪೂರ್ಣಗೊಳಿಸಿದ ಬಳಿಕ ಆ ಹಣವನ್ನು ಮರು ಪಾವತಿ ಮಾಡಲಾಗುತ್ತದೆ.ಇದು ಮೂರು ತಿಂಗಳ ಪದವಿಯಾಗಿದ್ದು, ಉದ್ಯೋಗದಲ್ಲಿರುವ ಯುವಜನತೆಗಾಗಿ ವಾರಾಂತ್ಯ ಮತ್ತು ಸಂಜೆ ಪಾಳಿಯ ಆಯ್ಕೆಗಳೂ ಇವೆ ಎಂದು ವಿವರಿಸಿದರು.

ADVERTISEMENT

ಈ ಕಾರ್ಯಕ್ರಮವು ಉದ್ಯೋಗ ಪಡೆಯಲು ಮತ್ತು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.