ADVERTISEMENT

ದೆಹಲಿ | ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕ: ಸಿಎಂ ರೇಖಾ ಗುಪ್ತಾ

ಪಿಟಿಐ
Published 6 ಜೂನ್ 2025, 12:36 IST
Last Updated 6 ಜೂನ್ 2025, 12:36 IST
ರೇಖಾ ಗುಪ್ತಾ
ರೇಖಾ ಗುಪ್ತಾ   

ನವದೆಹಲಿ: ದೆಹಲಿ ಸರ್ಕಾರವು ನಗರದಾದ್ಯಂತ ಎಲ್ಲ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶುಕ್ರವಾರ ತಿಳಿಸಿದರು.

ಶಾಲಿಮಾರ್‌ ಬಾಗ್‌ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ನೀರಿನ ಘಟಕವನ್ನು ಉದ್ಘಾಟಿಸಿದ ಬಳಿಕ ರೇಖಾ ಮಾತನಾಡಿದರು. ಈ ವೇಳೆ ಹಿಂದಿನ ಎಎಪಿ ಸರ್ಕಾರದ ಶಿಕ್ಷಣ ನೀತಿಯನ್ನು ಅವರು ಟೀಕಿಸಿದರು.

‘ಸರ್ಕಾರವು ಈ ವರ್ಷ ಶಾಲೆಗಳಲ್ಲಿ 7,000 ಸ್ಮಾರ್ಟ್ ಕೊಠಡಿಗಳು, 100 ಭಾಷಾ ಪ್ರಯೋಗಾಲಯಗಳು ಹಾಗೂ 175 ಡಿಜಿಟಲ್‌ ಗ್ರಂಥಾಲಯಗಳನ್ನು ಸ್ಥಾಪಿಸಲಿದೆ’ ಎಂದು ಹೇಳಿದರು.

ADVERTISEMENT

ಬಜೆಟ್‌ನಲ್ಲಿ ಘೋಷಿಸಿದಂತೆ ಸರ್ಕಾರಿ ಶಾಲೆಗಳ 1,200 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುವುದು. ಶಾಲೆಗಳ ದುರಸ್ತಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.