ADVERTISEMENT

ಪಿ.ಎಂ ಕೇರ್ಸ್ ನಿಧಿ: ದೆಹಲಿ ಹೈಕೋರ್ಟ್‌ನಲ್ಲಿ ಜ.31ಕ್ಕೆ ವಿಚಾರಣೆ 

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 11:04 IST
Last Updated 16 ಸೆಪ್ಟೆಂಬರ್ 2022, 11:04 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ: ಸಂವಿಧಾನ ಮತ್ತು ಮಾಹಿತಿ ಹಕ್ಕು ಕಾಯಿದೆಅಡಿ‘ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ನೆರವು ಮತ್ತು ಪರಿಹಾರ ಕಲ್ಪಿಸುವ ಪ್ರಧಾನಿಯವರ ನಿಧಿ’ (ಪಿಎಂ ಕೇರ್ಸ್ ಫಂಡ್) ಕಾನೂನು ಸ್ಥಿತಿಗೆ ಸಂಬಂಧಿಸಿದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಜ.31ರಂದು ವಿಚಾರಣೆ ನಡೆಸಲು ಪಟ್ಟಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠವು, ನ್ಯಾಯಾಲಯ ನೀಡಿದ ಹಿಂದಿನ ಆದೇಶದ ಪ್ರಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲು ಕೇಂದ್ರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಪಿ.ಎಂ ಕೇರ್ಸ್ ನಿಧಿ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ಕೋರಿ ಜುಲೈನಲ್ಲಿ ಸಮ್ಯಕ್ ಗಂಗ್ವಾಲ್ ಸಲ್ಲಿಸಿದ ಅರ್ಜಿ ಕುರಿತು ವಿವರವಾದ ಮತ್ತು ಸಮಗ್ರವಾದ ಉತ್ತರ ನೀಡುವಂತೆ ನ್ಯಾಯಾಲಯ ಕೇಂದ್ರಕ್ಕೆ ಸೂಚಿಸಿತ್ತು.

ADVERTISEMENT

ಪ್ರಮುಖ ವಿಷಯಕ್ಕೆ ಕೇವಲ ಒಂದು ಪುಟದ ಉತ್ತರ ಸಲ್ಲಿಸಿರುವುದನ್ನು ನ್ಯಾಯಾಲಯ ಗಮನಿಸಿದ್ದು, ಸರ್ಕಾರದಿಂದ ವಿವರವಾದ ಪ್ರತಿಕ್ರಿಯೆ ಬಯಸುತ್ತದೆ ಎಂದು ಹೇಳಿದೆ.

ಅರ್ಜಿದಾರಸಮ್ಯಕ್ ಗಂಗ್ವಾಲ್ ಅವರುಪಿ.ಎಂಕೇರ್ಸ್ಅನ್ನುಆರ್‌ಟಿಐ ಕಾಯ್ದೆಯಡಿ ‘ಸಾರ್ವಜನಿಕ ಪ್ರಾಧಿಕಾರ’ವೆಂದು ಘೋಷಿಸುವಂತೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.