ADVERTISEMENT

ದೆಹಲಿ: 173 ದಿನಗಳ ಬಳಿಕ ಮಜೆಂಟಾ ಲೈನ್ ಮೆಟ್ರೊ ಸಂಚಾರ ಪುನರಾರಂಭ

ಏಜೆನ್ಸೀಸ್
Published 11 ಸೆಪ್ಟೆಂಬರ್ 2020, 4:30 IST
Last Updated 11 ಸೆಪ್ಟೆಂಬರ್ 2020, 4:30 IST
ಅಂತರ ಕಾಯ್ದುಕೊಂಡು ಮೆಟ್ರೊಗಾಗಿ ಕಾಯುತ್ತಿರುವ ಪ್ರಯಾಣಿಕರು
ಅಂತರ ಕಾಯ್ದುಕೊಂಡು ಮೆಟ್ರೊಗಾಗಿ ಕಾಯುತ್ತಿರುವ ಪ್ರಯಾಣಿಕರು   

ನವದೆಹಲಿ: ಕೋವಿಡ್‌–19ನಿಂದಾಗಿ ಐದು ತಿಂಗಳ ಕಾಲ ಸ್ಥಗಿತಗೊಂಡಿದ್ದ ದೆಹಲಿ ಮೆಟ್ರೊ ಸೇವೆ ಮಜೆಂಟಾ ಲೈನ್‌ನಲ್ಲಿಶುಕ್ರವಾರ ಪುನರಾರಂಭಗೊಂಡಿದೆ.

‘ಪ್ರಯಾಣಿಕರುಅಂತರ ಕಾಪಾಡಿಕೊಳ್ಳುವುದು ಮತ್ತು ಮಾಸ್ಕ್‌ ಧರಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಮುಖ್ಯ ಗುರಿಯಾಗಿದೆ. ಇದುವರೆಗೆ ಯಾವುದೇ ನಿಯಮ ಉಲ್ಲಂಘನೆ ಪ್ರಕರಣಗಳು ಕಂಡು ಬಂದಿಲ್ಲ’ ಎಂದು ಡಿಸಿಪಿ (ಮೆಟ್ರೊ) ಜಿತೇಂದ್ರ ಮಣಿ ಹೇಳಿದ್ದಾರೆ.

ಕಳೆದ ಸೋಮವಾರದಿಂದ ಹಳದಿ ಮಾರ್ಗದಲ್ಲಿ ಈಗಾಗಲೇ ರೈಲು ಸಂಚಾರ ಆರಂಭಿಸಲಾಗಿದೆ. ‘ಕೋವಿಡ್‌ ಮಾರ್ಗಸೂಚಿ ಅನುಸಾರ ಪ್ರಯಾಣಿಕರ ಸುರಕ್ಷತೆಗೆ ಬೇಕಾದ ಎಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆ’ ಎಂದು ದೆಹಲಿ ಮೆಟ್ರೊ ರೈಲು ಕಾರ್ಪೊರೆಷನ್‌ (ಡಿಎಂಆರ್‌ಸಿ) ತಿಳಿಸಿದೆ.

ADVERTISEMENT

ಮೆಟ್ರೊ ರೈಲುಗಳು ಬೆಳಿಗ್ಗೆ 7-1 ಗಂಟೆ, ಸಂಜೆ 4–10 ಗಂಟೆಯವರೆಗೆ ಎರಡುಹಂತಗಳಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಯಾಣಿಕರು ನಮ್ಮ ಸುರಕ್ಷತಾ ಮಾರ್ಗಸೂಚಿಗಳನ್ನು ಸಮರ್ಥವಾಗಿ ಅನುಸರಿಸುತ್ತಿದ್ದಾರೆ. ಇಂದು ನಾವು ಮುನ್ನೆಚ್ಚೆರಿಕಾ ಕ್ರಮಗಳನ್ನು ಕೈಗೊಂಡು ಮಜೆಂಟಾ ಲೈನ್‌ನಲ್ಲಿಯಶಸ್ವಿಯಾಗಿ ಕಾರ್ಯಾಚರಣೆ ಆರಂಭಿಸಿದ್ದೇವೆ’ ಎಂದು ಡಿಎಂಆರ್‌ಸಿ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.