ADVERTISEMENT

ಜೈಲಿನಲ್ಲಿ ದೆಹಲಿ ಸಚಿವರಿಂದ ಅಧಿಕಾರ ದುರ್ಬಳಕೆ; ತನಿಖಾ ಸಮಿತಿ

ಪಿಟಿಐ
Published 1 ಡಿಸೆಂಬರ್ 2022, 14:25 IST
Last Updated 1 ಡಿಸೆಂಬರ್ 2022, 14:25 IST
ಸತ್ಯೇಂದರ್ ಜೈನ್‌
ಸತ್ಯೇಂದರ್ ಜೈನ್‌   

ನವದೆಹಲಿ: ಬಂಧನದಲ್ಲಿರುವ ಸಚಿವ ಸತ್ಯೇಂದರ್ ಜೈನ್‌ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಹ ಆರೋಪಿಯನ್ನು ಜೈಲಿನಲ್ಲಿ ಭೇಟಿಯಾಗಿದ್ದಾರೆ ಎಂದು ಲೆಫ್ಟಿನಂಟ್‌ ಗವರ್ನರ್ ರಚಿಸಿದ್ದ ತನಿಖಾ ಸಮಿತಿ ಹೇಳಿದೆ.

ದೆಹಲಿ ಸರ್ಕಾರದ ಗೃಹ, ಕಾನೂನು ಮತ್ತು ಗುಪ್ತಚರ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯನ್ನು ಲೆಫ್ಟಿನಂಟ್‌ ಗವರ್ನರ್ ವಿ.ಕೆ.ಸಕ್ಸೇನಾ ರಚಿಸಿದ್ದರು.

ಜೈನ್‌ರನ್ನು ಇ.ಡಿ ಅಧಿಕಾರಿಗಳು ಮೇ 31ರಂದು ಬಂಧಿಸಿದ್ದರು. ಎಎಪಿ ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ಜೈಲಿನಲ್ಲಿ ಸಚಿವರಿಗೆ ರಾಜಾತಿಥ್ಯ ನೀಡಿದ್ದಕ್ಕಾಗಿ ಡಿಜಿ (ಕಾರಾಗೃಹ) ಸಂದೀಪ್‌ ಗೋಯಲ್ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದೂ ತನಿಖಾ ಸಮಿತಿ ಸಲಹೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.