(ಸಾಂದರ್ಭಿಕ ಚಿತ್ರ)
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2020ರಿಂದ 2024ರವರೆಗೆ 2,450 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರವು ರಾಜ್ಯಸಭೆಗೆ ಬುಧವಾರ ಮಾಹಿತಿ ನೀಡಿದೆ.
ರಾಮ್‌ಜಿ ಲಾಲ್ ಸುಮನ್ ಅವರ ಲಿಖಿತ ಪ್ರಶ್ನೆಗೆ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಅವರು ಉತ್ತರ ನೀಡಿ ಈ ಮಾಹಿತಿ ಸಲ್ಲಿಸಿದ್ದಾರೆ.
2024ರಲ್ಲಿ 504 ಕೊಲೆಗಳು, 2023ರಲ್ಲಿ 506, 2022ರಲ್ಲಿ 509 ಕೊಲೆಗಳಾಗಿವೆ. 2020 ಹಾಗೂ 2021ರಲ್ಲಿ ಕೋವಿಡ್–19 ಸೋಂಕು ವ್ಯಾಪಕವಾಗಿದ್ದ ಅವಧಿಯಲ್ಲೂ ಕ್ರಮವಾಗಿ 472 ಹಾಗೂ 459 ಕೊಲೆ ಪ್ರಕರಣಗಳು ದಾಖಲಾಗಿವೆ.
‘ದೆಹಲಿಯಲ್ಲಿ ಕೊಲೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದೆನ್ನಲಾಗಿದೆ. ಇದು ಸತ್ಯವೇ? ಕಳೆದ ಐದು ವರ್ಷಗಳಲ್ಲಿ ಎಷ್ಟು ಕೊಲೆಗಳಾಗಿವೆ?’ ಎಂದು ರಾಮ್‌ಜಿ ಪ್ರಶ್ನೆ ಕೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.