ADVERTISEMENT

ಲಸಿಕೆ ವೇಗ ಉಳಿಸಿಕೊಳ್ಳಲು ದೆಹಲಿಗೆ ಜುಲೈನಲ್ಲಿ 45 ಲಕ್ಷ ಡೋಸ್ ಅಗತ್ಯವಿದೆ: ಅತಿಶಿ

ಪಿಟಿಐ
Published 27 ಜೂನ್ 2021, 14:09 IST
Last Updated 27 ಜೂನ್ 2021, 14:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿ ದಿನವೊಂದಕ್ಕೆ 1.5 ಲಕ್ಷ ಲಸಿಕೆ ಡೋಸ್‌ ನೀಡಲಾಗುತ್ತಿದ್ದು, ಇದೇ ವೇಗವನ್ನು ಉಳಿಸಿಕೊಳ್ಳಲು ಜುಲೈನಲ್ಲಿ ನಗರಕ್ಕೆ 45 ಲಕ್ಷ ಕೋವಿಡ್ ಲಸಿಕೆ ಡೋಸ್ ಅಗತ್ಯವಿರುವುದಾಗಿ ದೆಹಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ ಎಂದು ಎಎಪಿ ಶಾಸಕಿ ಅತಿಶಿ ಭಾನುವಾರ ತಿಳಿಸಿದ್ದಾರೆ.

'ವ್ಯಾಕ್ಸಿನೇಷನ್ ವೇಗ ಹೆಚ್ಚಾದರೆ 45 ಲಕ್ಷಕ್ಕಿಂತ ಹೆಚ್ಚಿನ ಡೋಸ್‌ ಬೇಕಾಗುತ್ತವೆ. ದೆಹಲಿಯಲ್ಲಿ ಶನಿವಾರ 2.07 ಲಕ್ಷ ಲಸಿಕೆ ಡೋಸ್‌ ನೀಡಿದ್ದು, ಅದರಲ್ಲಿ 1.50 ಲಕ್ಷಕ್ಕೂ ಹೆಚ್ಚು ಯುವಕರಿಗೆ ನೀಡಲಾಗಿದೆ' ಎಂದು ಅತಿಶಿ ತಿಳಿಸಿದ್ದಾರೆ.

ನಗರದ ವ್ಯಾಕ್ಸಿನೇಷನ್ ಬುಲೆಟಿನ್ ಪ್ರಕಾರ, 18 ರಿಂದ 44 ವಯಸ್ಸಿನ ದೆಹಲಿಯ ಶೇ. 25 ರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ.

ADVERTISEMENT

ಸದ್ಯ 5.4 ಲಕ್ಷ ಕೋವಿಶೀಲ್ಡ್ ಡೋಸ್‌ ಸೇರಿದಂತೆ ದೆಹಲಿಯಲ್ಲಿ 7.06 ಲಕ್ಷ ಲಸಿಕೆ ಡೋಸ್‌ ಲಭ್ಯವಿದೆ. ಅಧಿಕಾರಿಗಳು ಪ್ರತಿದಿನ 2 ಲಕ್ಷ ಜನರಿಗೆ ಲಸಿಕೆ ನೀಡುವ ವೇಗವನ್ನು ಮುಂದುವರಿಸಿದರೆ, ಈ ದಾಸ್ತಾನು ಮೂರು ದಿನಗಳಲ್ಲಿ ಮುಗಿಯುತ್ತದೆ ಎಂದು ಅವರು ಹೇಳಿದರು.

'ದಿನಕ್ಕೆ ಜನರಿಗೆ 1.5 ಲಕ್ಷ ಡೋಸ್ ಲಸಿಕೆ ಹಾಕುವುದನ್ನು ಮುಂದುವರಿಸಲು ದೆಹಲಿಗೆ 45 ಲಕ್ಷ ಲಸಿಕೆ ಡೋಸ್‌ ಬೇಕು ಎಂದು ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ' ಎಂದು ವ್ಯಾಕ್ಸಿನೇಷನ್ ಬುಲೆಟಿನ್ ಬಿಡುಗಡೆ ಮಾಡುವಾಗ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.