
ನವದೆಹಲಿ: ಹೊಸ ವರ್ಷಾಚರಣೆಗೂ ಮುನ್ನ ದೆಹಲಿ ಪೊಲೀಸರು ಕೈಗೊಂಡ ‘ಆಪರೇಷನ್ ಆಘಾತ್ 3.0’ ಕಾರ್ಯಾಚರಣೆಯಲ್ಲಿ 966 ಜನರನ್ನು ಬಂಧಿಸಿದ್ದಾರೆ. ಅವರಿಂದ ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳು, ಅಕ್ರಮ ಮದ್ಯ, ಮೊಬೈಲ್ ಮತ್ತು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ವರ್ಷಾಂತ್ಯದ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿದ ಸಾರ್ವಜನಿಕ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಸಂಘಟಿತ ಅಪರಾಧ, ಬೀದಿ ಅಪರಾಧ ಚಟುವಟಿಕೆ ನಿಗ್ರಹಿಸಲು ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ಮಾಹಿತಿ ನೀಡಿದರು.
ದೆಹಲಿ ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಮತ್ತು ಸಾರ್ವಜನಿಕ ಜೂಜಾಟ ಕಾಯ್ದೆ ಅಡಿ 331 ಆರೋಪಿಗಳನ್ನು ಹಾಗೂ ವಿವಿಧ ಅಪರಾಧ ತಡೆಗಟ್ಟುವ ನಿಬಂಧನೆಗಳ ಅಡಿಯಲ್ಲಿ 504 ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.