ನವದೆಹಲಿ: ಟಿ.ವಿ ಧಾರಾವಾಹಿ ನಿರ್ಮಾಪಕರು ಮತ್ತು ನಿರ್ದೇಶಕರು ಎಂದು ಹೇಳಿಕೊಂಡು ಅಭಿನಯಾಕಾಂಕ್ಷಿಗಳನ್ನು ವಂಚಿಸಿದ ವ್ಯಕ್ತಿ ಮತ್ತು ಮಹಿಳೆಯನ್ನು ದೆಹಲಿ ಪೊಲೀಸರು ನೈರುತ್ಯ ದೆಹಲಿಯಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಬಾಲಿವುಡ್ ಚಿತ್ರ ‘ಬಂಟಿ ಔರ್ ಬಬ್ಲಿ’ನಿಂದ ಪ್ರೇರಿತರಾಗಿದ್ದರು ಎಂದು ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.
ಲಖನೌ ನಿವಾಸಿ ತರುಣ್ ಶೇಖರ್ ಶರ್ಮಾ (32) ಮತ್ತು ದೆಹಲಿ ನಿವಾಸಿ ಆಶಾ ಸಿಂಗ್ ಅಲಿಯಾಸ್ ಭಾವನಾ (29) ಬಂಧಿತರು. ಆರೋಪಿಗಳ ವಿರುದ್ಧ ದೇಶದಾದ್ಯಂತ 20ಕ್ಕೂ ಹೆಚ್ಚು ದೂರುಗಳಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಜನಪ್ರಿಯ ಟಿ.ವಿ ಧಾರಾವಾಹಿಗಳು ಮತ್ತು ಒಟಿಟಿ ಕಾರ್ಯಕ್ರಮಗಳಲ್ಲಿ ಪಾತ್ರಗಳನ್ನು ನೀಡುವುದಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಆಕಾಂಕ್ಷಿಗಳನ್ನು ಆಕರ್ಷಿಸುತ್ತಿದ್ದರು. ಇತ್ತೀಚಿನ ಪ್ರಕರಣವೊಂದರಲ್ಲಿ ದೂರುದಾರರಿಂದ ₹24 ಲಕ್ಷ ವಂಚನೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.