ADVERTISEMENT

ಹತ್ಯೆ ಪ್ರಕರಣ: ಅನ್ಮೋಲ್ ಬಿಷ್ಣೋಯಿ ಗ್ಯಾಂಗ್‌ನ ಐವರ ಬಂಧನ

ಪಿಟಿಐ
Published 17 ಡಿಸೆಂಬರ್ 2025, 15:33 IST
Last Updated 17 ಡಿಸೆಂಬರ್ 2025, 15:33 IST
_
_   

ದೆಹಲಿ: ಈ ತಿಂಗಳ ಆರಂಭದಲ್ಲಿ ಚಂಡೀಗಢದಲ್ಲಿ ನಡೆದ ಪ್ರತಿಸ್ಪರ್ಧಿ ಗ್ಯಾಂಗ್‌ಸ್ಟರ್‌ನ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ‘ಅನ್ಮೋಲ್ ಬಿಷ್ಣೋಯಿ–ಹ್ಯಾರಿ ಬಾಕ್ಸರ್‌’ ಗುಂಪಿಗೆ ಸೇರಿದ ಐವರು ಸದಸ್ಯರನ್ನು ಬಂಧಿಸಿದ್ದಾರೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯಿಯ ಮಾಜಿ ಆಪ್ತ ಸಹಾಯಕ ಇಂದರ್‌ಪ್ರೀತ್ ಸಿಂಗ್ ಅಲಿಯಾಸ್ ಪ್ಯಾರಿಯನ್ನು ಡಿಸೆಂಬರ್ 1ರಂದು ಸೆಕ್ಟರ್ 26ರಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಕೊಲೆಯ ಹಿಂದೆ ಗ್ಯಾಂಗ್‌ವಾರ್ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕೊಲೆಯಾದ ಪ್ಯಾರಿ ಈ ಹಿಂದೆ ಬಿಷ್ಣೋಯಿ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿದ್ದನು. ಆದರೆ ನಂತರ ಕೆನಡಾದಲ್ಲಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ ಗುಂಪಿನ ಜೊತೆ ಸೇರಿಕೊಂಡಿದ್ದನು. ಚಂಡೀಗಢ ಮೂಲದ ಈತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

ADVERTISEMENT

ಕೊಲೆಯ ನಂತರ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿತ್ತು. ದುಬೈನಲ್ಲಿ ನಡೆದ ತಮ್ಮ ಫೈನಾನ್ಷಿಯರ್‌ ಹತ್ಯೆಗೆ ಸೇಡು ತೀರಿಸಲು ಈ ಕೊಲೆ ನಡೆಸಲಾಗಿದೆ ಎಂದು ಅದು ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.