ADVERTISEMENT

ಕನಿಷ್ಠ ಉಷ್ಣಾಂಶ: ಚಳಿಗೆ ನಡುಗಿದ ದೆಹಲಿ

ಪಿಟಿಐ
Published 11 ಡಿಸೆಂಬರ್ 2024, 5:31 IST
Last Updated 11 ಡಿಸೆಂಬರ್ 2024, 5:31 IST
<div class="paragraphs"><p>ದೆಹಲಿಯಲ್ಲಿ ಹೆಚ್ಚಿದ ಮಂಜು</p></div>

ದೆಹಲಿಯಲ್ಲಿ ಹೆಚ್ಚಿದ ಮಂಜು

   

ನವದೆಹಲಿ: ರಾಜಧಾನಿಯಲ್ಲಿ ಚಳಿಯ ಕೊರೆತ ಹಾಗೂ ಮಂಜಿನ ಮುಸುಕು ತೀವ್ರವಾಗಿದ್ದು ಬುಧವಾರ 4.9 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

ಇದು ಈ ಚಳಿಗಾಲ ಅವಧಿಯ ಅತ್ಯಂತ ಕನಿಷ್ಠ ಉಷ್ಣಾಂಶವಾಗಿದೆ.

ADVERTISEMENT

ಸಫ್ದರ್ಜಂಗ್‌ನಲ್ಲಿ 4.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಡಿಸೆಂಬರ್ 27, 1930ರಂದು 0.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಅತ್ಯಂತ ಕನಿಷ್ಠ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಗಾಳಿಯ ಗುಣಮಟ್ಟದಲ್ಲಿ ಅಲ್ಪ ಪ್ರಮಾಣದ ಸುಧಾರಣೆ ಕಂಡುಬಂದಿದೆ. ಮಂಗಳವಾರ ಏಕ್ಯೂಐ 223ರಷ್ಟಿತ್ತು. ಇಂದು (ಡಿ.11) 207 ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.