ADVERTISEMENT

Classroom Construction Case: ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಸತ್ಯೇಂದ್ರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 14:25 IST
Last Updated 6 ಜೂನ್ 2025, 14:25 IST
‌ಸತ್ಯೇಂದ್ರ ಜೈನ್‌
‌ಸತ್ಯೇಂದ್ರ ಜೈನ್‌   

ನವದೆಹಲಿ: ಸರ್ಕಾರಿ ಶಾಲೆಗಳ ಕೊಠ‌ಡಿ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಮಾಜಿ ಸಚಿವ ‌ಸತ್ಯೇಂದ್ರ ಜೈನ್‌ ಅವರು ಭ್ರಷ್ಟಾಚಾರ ನಿಗ್ರಹ ಘಟಕದ(ಎಸಿಬಿ) ಮುಂದೆ ಶುಕ್ರವಾರ ವಿಚಾರಣೆಗೆ ಹಾಜರಾದರು.

ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ‌ಸತ್ಯೇಂದ್ರ ಮತ್ತು ಮತ್ತೊಬ್ಬ ಮಾಜಿ ಸಚಿವ ಮನೀಷ್‌ ಸಿಸೋಡಿಯಾ ಅವರಿಗೆ ಎಸಿಬಿ ಸಮನ್ಸ್ ಜಾರಿಗೊಳಿಸಿತ್ತು. ಸಿಸಿಸೋಡಿಯಾ ಅವರ ವಿಚಾರಣೆಯನ್ನು ಇದೇ 9ರಂದು ನಿಗದಿಪಡಿಸಲಾಗಿದೆ.

‘ಎಎಪಿ ಸರ್ಕಾರವು ದೆಹಲಿ ನಗರದ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದೆ. ಆದರೆ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ’ ಎಂದು ‌ಸತ್ಯೇಂದ್ರ ಅವರು ವಿಚಾರಣೆಗೆ ಹಾಜರಾಗುವ ಮುನ್ನ ತಿಳಿಸಿದರು.

ADVERTISEMENT

ದೆಹಲಿ ಸರ್ಕಾರಿ ಶಾಲೆಗಳಲ್ಲಿ 1,200 ಕೊಠಡಿಗಳು ನಿರ್ಮಿಸುವ ಯೋಜನೆಯಲ್ಲಿ ₹2 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪದಡಿ ಎಸಿಬಿ ಏಪ್ರಿಲ್‌ 30ರಂದು ಪ್ರಕರಣ ದಾಖಲಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.