ADVERTISEMENT

ಗಮ್ಯ ತಲುಪಿದ ವಲಸೆ ಕಾರ್ಮಿಕರು; ಶ್ರಮಿಕ್ ರೈಲುಗಳಿಗಾಗಿ ಕುಸಿಯುತ್ತಿದೆ ಬೇಡಿಕೆ 

ಏಜೆನ್ಸೀಸ್
Published 3 ಜೂನ್ 2020, 3:15 IST
Last Updated 3 ಜೂನ್ 2020, 3:15 IST
ಉತ್ತರ ಪ್ರದೇಶದಲ್ಲಿ ಶ್ರಮಿಕ್ ರೈಲು  (ಪಿಟಿಐ)
ಉತ್ತರ ಪ್ರದೇಶದಲ್ಲಿ ಶ್ರಮಿಕ್ ರೈಲು (ಪಿಟಿಐ)   

ನವದೆಹಲಿ:ಲಾಕ್‌ಡೌನ್‌ನಿಂದಾಗಿ ವಿವಿಧ ರಾಜ್ಯಗಳಲ್ಲಿದ್ದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವುದಕ್ಕಾಗಿ ಮೇ.1ರಂದು ಶ್ರಮಿಕ್ ರೈಲು ಆರಂಭವಾಗಿತ್ತು. ಇಲ್ಲಿಯವರೆಗೆ 4,155 ರೈಲುಗಳು ಸಂಚಾರ ನಡೆಸಿದ್ದು ಸುಮಾರು 5.7 ದಶಲಕ್ಷ ವಲಸೆ ಕಾರ್ಮಿಕರನ್ನು ಕರೆದೊಯ್ದಿದೆ.

ಶ್ರಮಿಕ್ ರೈಲಿಗಾಗಿ ರಾಜ್ಯ ಸರ್ಕಾರಗಳ ಬೇಡಿಕೆ ಇರುವವರೆಗೆ ಈ ರೈಲುಗಳು ಸಂಚಾರ ನಡೆಸಲಿವೆ ಎಂದು ರೈಲ್ವೆ ಸಚಿವ ಪೀಯುಷ್ ಗೋಯಲ್ ಹೇಳಿದ್ದರು. ಭಾನುವಾರ 69 ಶ್ರಮಿಕ್ ರೈಲುಗಳು ಸಂಚಾರ ನಡೆಸಿವೆ. ಮಂಗಳವಾರ ಬೆಳಗ್ಗೆ 10 ಗಂಟೆಯವರೆಗೆ 102 ಶ್ರಮಿಕ್ ರೈಲುಗಳು ಸಂಚಾರ ನಡೆಸಿವೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಶ್ರಮಿಕ್ ರೈಲಿಗಾಗಿರುವ ಬೇಡಿಕೆ ಕುಸಿದಿದ್ದು, ಕೆಲವೇ ಕೆಲವು ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. ಬಹುತೇಕ ವಲಸೆ ಕಾರ್ಮಿಕರು ಅವರವರ ಊರು ಸೇರಿದ್ದಾರೆ. ಶ್ರಮಿಕ್ ರೈಲು ಸಂಚಾರ ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಹೆಸರು ಹೇಳಲಿಚ್ಛಿಸದ ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಮುಂಬೈ ಸಬರ್ಬನ್ ಪ್ರದೇಶದಿಂದ ಮಂಗಳವಾರ 2 ರೈಲುಗಳು ಸಂಚಾರ ನಡೆಸಿಲೆ ಎಂದು ಪಶ್ಚಿಮ ರೈಲ್ವೆ ಹೇಳಿದೆ.ಪಶ್ಚಿಮ ರೈಲ್ವೆಯಲ್ಲಿ ಇಲ್ಲಿಯವರೆಗೆ 1,214 ಶ್ರಮಿಕ್ ರೈಲುಗಳು ಸಂಚಾರ ನಡೆಸಿದ್ದ 18,23,826 ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲಾಗಿದೆ.ಸೋಮವಾರದವರೆಗೆ ವಿವಿಧ ರಾಜ್ಯಗಳಿಂದ ಶ್ರಮಿಕ್ ರೈಲಿಗಾಗಿ ಬಂದ ಬೇಡಿಕೆ ಕೇವಲ 321.

ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಅವರ ಮಾಹಿತಿಯನ್ನು ಕಳುಹಿಸುವಂತೆ ಮೇ29ರಂದು ರೈಲ್ವೆ ಮಂಡಳಿ ಅಧ್ಯಕ್ಷ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದುಶ್ರಮಿಕ್ ರೈಲಿಗಾಗಿರುವ ಬೇಡಿಕೆಗಳು ಕಡಿಮೆಯಾಗುತ್ತಿವೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ಕುಮಾರ್ ಯಾದವ್ ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಮೇ 22 - ಮೇ 28ರ ಅವಧಿಯಲ್ಲಿ ಸುಮಾರು 1,524 ಶ್ರಮಿಕ್ ವಿಶೇಷ ರೈಲುಗಳು ಸಂಚಾರ ನಡೆಸಿದ್ದು 2 ದಶ ಲಕ್ಷ ವಲಸೆ ಕಾರ್ಮಿಕರನ್ನು ಕರೆದೊಯ್ದಿದೆ. ಮೇ.20ರಂದು 279 ರೈಲುಗಳು ಸಂಚಾರ ನಡೆಸಿವೆ. ಕಳೆದ ವಾರ 923 ಶ್ರಮಿಕ್ ರೈಲುಗಳಿಗಾಗಿ ಬೇಡಿಕೆ ಬಂದಿತ್ತು. ಆದರೆ ಗುರುವಾರದ ಹೊತ್ತಿಗೆ ಬಂದ ಬೇಡಿಕೆ 450.

ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಅತೀ ಹೆಚ್ಚು ರೈಲುಗಳು ಸಂಚಾರ ನಡೆಸಿವೆ. ಜಾರ್ಖಂಡ್, ಒಡಿಶಾ ಮತು ಪಶ್ಚಿಮ ಬಂಗಾಳ ನಂತರದ ಸ್ಥಾನದಲ್ಲಿವೆ.

ಇಲ್ಲಿಯವರೆಗೆ ಗುಜರಾತ್‌ನಿಂದ(1027 ರೈಲು), ಮಹಾರಾಷ್ಟ್ರ (802ರೈಲು), ಪಂಜಾಬ್ (416ರೈಲು ), ಉತ್ತರ ಪ್ರದೇಶ (288 ರೈಲು ) ಮತ್ತು ಬಿಹಾರ (294 ರೈಲು) ಹೊರಟಿವೆ, ಅದೇ ವೇಳೆ ಅತೀ ಹೆಚ್ಚು ಶ್ರಮಿಕ್ ರೈಲು ಬಂದು ಸೇರಿದ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ, ಉತ್ತರ ಪ್ರದೇಶಕ್ಕೆ 1670 ರೈಲುಗಳು ಬಂದಿದ್ದು, ಬಿಹಾರ (1482), ಜಾರ್ಖಂಡ್ (194) , ಒಡಿಶಾ (180) ಮತ್ತು ಪಶ್ಚಿಮ ಬಂಗಾಳಕ್ಕೆ 135 ರೈಲುಗಳು ಬಂದಿವೆ.

ಮೇ 20ರಿಂದ ಮೇ 24ರವರೆಗದೆ ಸಂಚರಿಸಿದ ಬಹುತೇಕ ರೈಲುಗಳು ಮಾರ್ಗ ದಟ್ಟಣೆಯಿಂದ ಬೇರೆ ಮಾರ್ಗಗಳಲ್ಲಿ ಸಂಚರಿಸಿದೆ, 72 ರೈಲುಗಳು ಈ ರೀತಿ ಬೇರೆ ಮಾರ್ಗದಲ್ಲಿ ಸಂಚರಿಸಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ರೈಲುಗಳು ಈಗ ಸಂಚಾರ ನಡೆಸಿದ್ದು, ಯಾವುದೇ ದಟ್ಟಣೆ ಎದುರಿಸಿಲ್ಲ. ಶ್ರಮಿಕ್ ವಿಶೇಷ ರೈಲು ಹೊರತಾಗಿ ರೈಲ್ವೆ ಸಚಿವಾಲಯವು 15 ಜೋಡಿ ರಾಜಧಾನಿ ರೀತಿಯ ರೈಲುಗಳನ್ನು ಆರಂಭಿಸಿದ್ದು ಇದು ನವದೆಹಲಿಯನ್ನು ಸಂಪರ್ಕಿಸುತ್ತದೆ.ಜೂನ್ 1ರಂದು 200 ಪ್ರಯಾಣಿಕರ ರೈಲು ಸಂಚಾರ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.