ನೋಯ್ಡಾ: ಇಲ್ಲಿ ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆಇಂದು ಮಧ್ಯಾಹ್ನ ಸರಿಯಾಗಿ 2.30 ಕ್ಕೆ ನೆಲಸಮಗೊಳಿಸಲಾಯಿತು.
ಅಕ್ರಮ ಕಟ್ಟಡದ ವಿರುದ್ಧ ಧ್ವನಿ ಎತ್ತಿದ್ದ ಸ್ಥಳೀಯ ನಾಗರಿಕರು ಕಟ್ಟಡ ನೆಲಸಮವಾಗುವುದನ್ನು ಕಂಡು ಸಂಭ್ರಮಿಸಿದರು. ಬೃಹತ್ ಅವಳಿ ಕಟ್ಟಡಗಳು ನೆಲಸಮಗೊಳ್ಳುತ್ತಿದ್ದಂತೆಯೇ ಸ್ಥಳದಲ್ಲಿ ಭಾರಿ ಶಬ್ಧದೊಂದಿಗೆ ದಟ್ಟ ಹೊಗೆ ಆವರಿಸಿತು.
ದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮಿನಾರ್‌ಗಿಂತಲೂ ಎತ್ತರವಾದ ಈ ಕಟ್ಟಡಗಳನ್ನು ಕೇವಲ 9ಸೆಕೆಂಡ್ಅವಧಿಯಲ್ಲಿ ವಾಟರ್‌ಫಾಲ್ ಇಂಪ್ಲೋಷನ್ ತಂತ್ರಜ್ಞಾನದ ಮೂಲಕ ನೆಲಸಮ ಮಾಡಲಾಯಿತು.
100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಳಿಸಲಾಯಿತು.
ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು 3,700 ಕೆ.ಜಿ ಸ್ಫೋಟಕಗಳನ್ನು ಬಳಸಲಾಗಿತ್ತು.
ಸೆಕ್ಟರ್ 93ಎನಲ್ಲಿರುವ ಎಮರಾಲ್ಡ್ ಕೋರ್ಟ್ ಮತ್ತು ಹತ್ತಿರದ ಎಟಿಎಸ್ ವಿಲೇಜ್ ಸೊಸೈಟಿಗಳ ಸುಮಾರು 5,000 ನಿವಾಸಿಗಳು ಭಾನುವಾರ ಬೆಳಿಗ್ಗೆ 7 ಗಂಟೆಯೊಳಗೆ ಆವರಣ ಖಾಲಿ ಮಾಡುವಂತೆ ಸೂಚಿಸಲಾಗಿತ್ತು.
ಈ ಪೈಕಿ ಅನೇಕ ಮಂದಿ ಶನಿವಾರವೇ ಸ್ಥಳಾಂತರಗೊಂಡಿದ್ದಾರೆ. ಸುಮಾರು 3,000 ವಾಹನಗಳನ್ನು ತೆರವುಗೊಳಿಸಲಾಗುತ್ತಿದ್ದು, 200ರಷ್ಟು ಸಾಕುಪ್ರಾಣಿಗಳನ್ನು ಸ್ಥಳಾಂತರ ಮಾಡಲಾಗಿತ್ತು.
ಭಾರತದಲ್ಲಿ ನೆಲಸಮವಾಗಲಿರುವ ಅತ್ಯಂತ ಎತ್ತರದ ಕಟ್ಟಡ ಇದಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.