ADVERTISEMENT

'ನೋಟು ರದ್ದತಿ'  ಭಾರತದ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಹಗರಣ: ಕಪಿಲ್ ಸಿಬಲ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 10:07 IST
Last Updated 9 ಏಪ್ರಿಲ್ 2019, 10:07 IST
   

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನೇತಾರ ಕಪಿಲ್ ಸಿಬಲ್,ಕಳೆದ ಬಾರಿ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಹೇಳುತ್ತಿದ್ದರು 70 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಇಲ್ಲಿಯವರಗೆ ಏನು ಮಾಡಿದೆ? ನನಗೆ ನೀವು 70 ತಿಂಗಳು ಕೊಡಿ. ಅವರಿಗೆ 70 ತಿಂಗಳು ಕೊಟ್ಟು ದೇಶದಲ್ಲಿ ಏನಾಗಿದೆ ಎಂಬುದನ್ನು ನೀವೇ ನೋಡಿದ್ದೀರಿ.ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದಿದ್ದರು ಮೋದಿ.ಮೋದಿಯ ಸಾಥ್ ಮತ್ತು ಅಮಿತ್ ಶಾ ಅವರ ವಿಕಾಸ್‍ನ್ನು ನಾವು ನೋಡಿದ್ದೇವೆ.ಮೋದಿ ನಮ್ಮನ್ನು 5 ವರ್ಷಗಳ ಕಾಲ ಮೋಸ ಮಾಡುತ್ತಲೇ ಇದ್ದರು. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಮೊದಲಾದವುಗಳು ಅವರ ಹಿಡಿತದಲ್ಲಿ ಇದೆ. ಅವರನ್ನು ವಿರೋಧಿಸಿದರೆ ಈ ಸಂಸ್ಥೆಗಳ ಮೂಲಕ ವಿರೋಧಿಗಳು ಮೋದಿ ಟಾರ್ಗೆಟ್ ಮಾಡುತ್ತಾರೆ.

ಸುದ್ದಿಗೋಷ್ಠಿಯಲ್ಲಿ ಮೋದಿ ಸರ್ಕಾರದ ವಿರುದ್ಧ ಕೆಲವು ಆರೋಪಗಳನ್ನೂ ಸಿಬಲ್ ಮಾಡಿದ್ದಾರೆ.

ಕಪಿಲ್ ಸಿಬಲ್ ಹೇಳಿದ್ದೇನು?

ADVERTISEMENT

ರಾಹುಲ್ ರಥರೇಕರ್, ಸಚಿವ ಸಂಪುಟದ ಕಾರ್ಯಾಲಯದಲ್ಲಿ ಫೀಲ್ಡ್ ಅಸಿಸ್ಟೆಂಟ್ ಆಗಿರುವ ಇವರು ಹೇಳಿದ್ದೇನೆಂದೆರೆ ಮೂರು ಸರಣಿಯಲ್ಲಿ ತಲಾ₹1 ಲಕ್ಷ ಕೋಟಿ ನಕಲಿ ಹಣವನ್ನು ಮುದ್ರಿಸಲಾಗಿದೆ.ಈ ನೋಟುಗಳನ್ನು ವಿದೇಶದಲ್ಲಿ ಮುದ್ರಿಸಿ, ವಾಯುಪಡೆಯ ವಿಶೇಷವಿಮಾನ ಮೂಲಕ ಹಿಂಡಂನ್ ವಿಮಾನ ನೆಲೆಗೆ ತರಲಾಗಿತ್ತು. ಈ ನೋಟು ವಿನಿಮಯ ಕೆಲಸವನ್ನು ಅಮಿತ್ ಶಾ ಅವರೇ ನಿಯಂತ್ರಿಸಿದ್ದರು. ಇದಕ್ಕಾಗಿ ಬೇರೆ ಬೇರೆ ವಿಭಾಗದಲ್ಲಿ ವಿಶೇಷವಾಗಿ ಆರ್‌ಬಿಐ ಜತೆ ಸಹಕರಿಸಲು ಮತ್ತು ನಿರ್ವಹಣೆಗಾಗಿ 26 ಮಂದಿಯನ್ನು ಹೇಗೆ ನೇಮಕ ಮಾಡಲಾಯಿತು ಎಂಬುದನ್ನು ರಾಹುಲ್ ವಿವರಿಸಿದ್ದಾರೆ.

ಆರ್‌ಬಿಐಯಲ್ಲಿಕರೆನ್ಸಿ ವಿನಿಮಯ ವಹಿವಾಟು ಯಾವ ರೀತಿ ಪುನರಾವರ್ತನೆಗೊಳ್ಳುತ್ತಿದೆ ಎಂಬುದನ್ನು ತೋರಿಸಲು ರಿಲಾಯನ್ಸ್ ಜಿಯೊ ಡೇಟಾಬೇಸ್‍ನ್ನು ದುರ್ಬಳಕೆ ಮಾಡಲಾಗಿತ್ತು. ಊರ್ಜಿತ್ ಪಟೇಲ್ ಸಹಿ ಇರುವ ನೋಟುಗಳನ್ನು6 ತಿಂಗಳುಗಳ ಮುಂಚೆಯೇ ಮುದ್ರಿಸಲಾಗಿತ್ತು.ನೋಟು ರದ್ದತಿಭಾರತದ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಹಗರಣ.

ಈ ಬಗ್ಗೆ ಪತ್ರಕರ್ತರು ಕುಟುಕು ಕಾರ್ಯಾಚರಣೆ ನಡೆಸಿದ ಹಿಡನ್ ಕ್ಯಾಮೆರಾ ದೃಶ್ಯಗಳನ್ನು ಸಿಬಲ್ ಸಾಕ್ಷ್ಯವಾಗಿ ತೋರಿಸಿದ್ದಾರೆ.

ಹೀಗೆ ವಿದೇಶದಿಂದ ಮುದ್ರಿತವಾಗಿ ಬಂದ ಹಣವನ್ನು ರಾಜಕಾರಣಿಗಳಿಗೂ ಉದ್ಯಮಿಗಳಿಗೂ ನೀಡಲಾಗಿದೆ. ಇದರಲ್ಲಿ ಬ್ಯಾಂಕ್ ಸಿಬ್ಬಂದಿಗಳೂ ಭಾಗಿಯಾಗಿದ್ದಾರೆ.ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂ ಇದರಲ್ಲಿ ಶಾಮೀಲಾಗಿದ್ದಾರೆ.

ಈ ವ್ಯವಹಾರಗಳ ಬಗ್ಗೆಆರ್‌ಬಿಐಗೂ ಗೊತ್ತಿತ್ತು.ಮಹಾರಾಷ್ಟ್ರ ಇಂಡಸ್ಟ್ರಿಯಲ್ ಕಾರ್ಪರೇಷನ್‍ನ ಗೋದಾಮುಗಳಲ್ಲಿ ಈ ವ್ಯವಹಾರ ನಡೆದಿದೆ. ರಾಜಕಾರಣಿಗಳು, ಉದ್ಯಮಿಗಳು ಇಲ್ಲಿಗೆ ಬಂದು ನೋಟುಗಳನ್ನು ಬದಲಿಸಿಕೊಂಡು ಹೋಗುತ್ತಿದ್ದರು ಎಂದು ಕಪಿಲ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.