ADVERTISEMENT

ಮುಂಬೈ: ಸರ್ಕಾರಿ ಬಸ್‌ನಲ್ಲಿ ಸ್ಫೋಟಕ ಸಾಮಗ್ರಿ ಪತ್ತೆ

ಪಿಟಿಐ
Published 21 ಫೆಬ್ರುವರಿ 2019, 19:21 IST
Last Updated 21 ಫೆಬ್ರುವರಿ 2019, 19:21 IST

ಮುಂಬೈ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಬಸ್‌ನಲ್ಲಿ ಡಿಟೋನೇಟರ್‌ ಸೇರಿದಂತೆ ಕಚ್ಚಾಬಾಂಬ್‌ ತಯಾರಿಗೆ ಬೇಕಾದ ವಸ್ತುಗಳು ಪತ್ತೆಯಾಗಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಈ ಸಾಮಗ್ರಿಯನ್ನು ಬಸ್‌ನ ಆಸನದ ಕೆಳಗೆ ಇಡಲಾಗಿತ್ತು ಎಂದು ಪೊಲೀಸ್‌ ವಕ್ತಾರ ಸಹಾಯಕ ಇನ್‌ಸ್ಪೆಕ್ಟರ್‌ ಕುಂದನ್‌ ಗಾವ್ಡೆ ಹೇಳಿದ್ದಾರೆ.

ಬುಧವಾರ ರಾತ್ರಿ ಬಸ್‌ನ ದಿನದ ಸೇವೆ ಮುಗಿದ ನಂತರ ನಿರ್ವಾಹಕ ಬಸ್‌ ಅನ್ನು ತಪಾಸಣೆ ಮಾಡುತ್ತಿದ್ದಾಗ ಅನುಮಾನಾಸ್ಪದ ವಸ್ತುಗಳು ಕಂಡು ಬಂದವು. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ADVERTISEMENT

ಬಾಂಬ್‌ ನಿಷ್ಕ್ರೀಯ ತಂಡವನ್ನು ಸ್ಥಳಕ್ಕೆ ಕರೆಸಿ ತಪಾಸಣೆ ನಡೆಸಿದಾಗ ಎಲೆಕ್ಟ್ರಿಕ್‌ ವೈರ್, ಬ್ಯಾಟರಿ ಸೇರಿದಂತೆ ಡಿಟೋನೇಟರ್‌ ದೊರಕಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.