ADVERTISEMENT

ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ: ಅಮಿತ್‌ ಶಾ

5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಕನಸಿಗೆ ಗ್ರಾಮಗಳ ಅಭಿವೃದ್ಧಿ ಅವಶ್ಯಕ

ಪಿಟಿಐ
Published 12 ಜೂನ್ 2022, 13:29 IST
Last Updated 12 ಜೂನ್ 2022, 13:29 IST
ಐಆರ್‌ಎಂಎ ಘಟಿಕೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ –ಪಿಟಿಐ
ಐಆರ್‌ಎಂಎ ಘಟಿಕೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ –ಪಿಟಿಐ   

ಆನಂದ್ (ಗುಜರಾತ್): ಮಹತ್ವಾಕಾಂಕ್ಷೆಯ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಗುರಿ ಸಾಧಿಸಲು ಗ್ರಾಮಗಳ ಅಭಿವೃದ್ಧಿ ಅವಶ್ಯಕ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿಪ್ರಾಯಪಟ್ಟಿದ್ದಾರೆ‌.

ಭಾನುವಾರಗುಜರಾತ್‌ನಲ್ಲಿ ಇನ್‌ಸ್ಟಿಟ್ಯೂಟ್‌ ಆಫ್‌ ರೂರಲ್‌ ಮ್ಯಾನೇಜ್‌ಮೆಂಟ್‌ನ (ಐಆರ್‌ಎಂಎ) 41ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಗ್ರಾಮಗಳ ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಅಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ. ಮಹಾತ್ಮ ಗಾಂಧಿ ಈ ದೇಶದ ಆತ್ಮ ಹಳ್ಳಿಗಳಲ್ಲಿದೆ ಎಂದು ಹೇಳಿದ್ದರು. ನಾನು ಅದನ್ನು ಸಂಪೂರ್ಣವಾಗಿ ನಂಬುತ್ತೇನೆ’ ಎಂದು ಹೇಳಿದರು.

‘ಹಳ್ಳಿಗಳು ಸಮೃದ್ಧಿಯಾದರೆ, ಆತ್ಮನಿರ್ಭರವಾಗಿ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದರೆ ದೇಶವು ಸಮೃದ್ಧವಾಗಲಿದೆ. ಇದು ಆತ್ಮನಿರ್ಭರ ಭಾರತ ಮತ್ತು 5 ಟ್ರಿಲಿಯನ್ ಡಾಲರ್‌ ಆರ್ಥಿಕತೆ ಕನಸು ನನಸಾಗಲು ಸಹಾಯಕವಾಗುತ್ತದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.