ADVERTISEMENT

ವಿಮಾನ ಸಂಚಾರ ವ್ಯತ್ಯಯ: ಸಮಗ್ರ ವರದಿಯೊಂದಿಗೆ ಹಾಜರಾಗಿ: ಇಂಡಿಗೊಗೆ ಡಿಜಿಸಿಎ ಸೂಚನೆ

ಪಿಟಿಐ
Published 10 ಡಿಸೆಂಬರ್ 2025, 19:25 IST
Last Updated 10 ಡಿಸೆಂಬರ್ 2025, 19:25 IST
   

ಮುಂಬೈ: ಇತ್ತೀಚೆಗೆ ಉಂಟಾದ ವಿಮಾನ ಸಂಚಾರದ ಬಿಕ್ಕಟ್ಟಿಗೆ ಸಂಬಂಧಿಸಿದ ಎಲ್ಲ ದತ್ತಾಂಶಗಳೊಂದಿಗೆ ಗುರುವಾರ ಮಧ್ಯಾಹ್ನ 3 ಗಂಟೆಗೆ ತನ್ನ ಕಚೇರಿಗೆ ಹಾಜರಾಗುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ), ಇಂಡಿಗೊ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್‌ ಎಲ್ಬರ್ಸ್‌ಗೆ ಆದೇಶಿಸಿದೆ.

ದತ್ತಾಂಶಗಳ ಜೊತೆಗೆ, ಇತ್ತೀಚೆಗೆ ವಿಮಾನ ಸಂಚಾರ ವ್ಯತ್ಯಯದಲ್ಲಾದ ಸಂಪೂರ್ಣ ವರದಿ ಹಾಗೂ ಅಪ್‌ಡೇಟ್ ಆಗಿರುವ ದತ್ತಾಂಶದೊಂದಿಗೆ ಹಾಜರಾಗುವಂತೆ ಪೀಟರ್‌ಗೆ ತಿಳಿಸಿರುವುದಾಗಿ ಡಿಜಿಸಿಎ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ನಿಯಂತ್ರಕರ ಆದೇಶದ ಪ್ರಕಾರ, ವಿಮಾನಗಳ ಸಂಚಾರ ಮರುಸ್ಥಾಪನೆ, ಪೈಲಟ್‌ಗಳು ಮತ್ತು ಸಿಬ್ಬಂದಿಯ ನೇಮಕಾತಿ ಯೋಜನೆ, ಪೈಲಟ್ ಮತ್ತು ಕ್ಯಾಬಿನ್ ಕ್ರ್ಯೂ ಸಿಬ್ಬಂದಿಯ ಮಾಹಿತಿ, ರದ್ದಾದ ವಿಮಾನಗಳ ಸಂಖ್ಯೆ ಮತ್ತು ಟಿಕೆಟ್ ದರ ಮರು ಪಾವತಿ ಪ್ರಕ್ರಿಯೆ ಸೇರಿದಂತೆ ಸಮಗ್ರ ಮಾಹಿತಿಯನ್ನು ಪ್ರಸ್ತುತಪಡಿಸುವಂತೆ ವಿಮಾನಯಾನ ಸಂಸ್ಥೆಯನ್ನು ಕೇಳಲಾಗಿದೆ.

ADVERTISEMENT

ಡಿಜಿಸಿಎ ಸಹ, ತನ್ನ ಸಿಇಒ ಮತ್ತು ಎಲ್ಲಾ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.