ADVERTISEMENT

ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದ ಏರ್ ಏಷ್ಯಾದ ಇಬ್ಬರು ಅಧಿಕಾರಿಗಳು ಅಮಾನತು

ಪಿಟಿಐ
Published 11 ಆಗಸ್ಟ್ 2020, 6:22 IST
Last Updated 11 ಆಗಸ್ಟ್ 2020, 6:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದಡಿ ವೈಮಾನಿಕ ಕ್ಷೇತ್ರದ ನಿಯಂತ್ರಣ ಪ್ರಾಧಿಕಾರವಾದ ಡಿಜಿಸಿಎ, ಏರ್ ಏಷ್ಯಾ ಇಂಡಿಯಾದ ಇಬ್ಬರು ಹಿರಿಯ ಅಧಿಕಾರಿಗಳನ್ನು ಮೂರು ತಿಂಗಳ ಅವಧಿಗೆ ಅಮಾನತುಪಡಿಸಿದೆ. ವಾರದ ಹಿಂದೆಯೇ ಈ ಕ್ರಮಜಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ಏರ್ ಏಷ್ಯಾದ ಮಾಜಿ ಪೈಲಟ್ ಒಬ್ಬರು, ತಾವು ನಡೆಸುತ್ತಿರುವ ಫ್ಲೈಯಿಂಗ್ ಬೀಸ್ಟ ಯೂಟ್ಯೂಬ್ ಚಾನೆಲ್‌ನಲ್ಲಿ, ಕಡಿಮೆ ಪ್ರಯಾಣ ವೆಚ್ಚದ ವೈಮಾನಿಕ ಸಂಸ್ಥೆಯು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುತ್ತಿರುವ ಕುರಿತು ಆರೋಪ ಮಾಡಿದ್ದರು.

ಏರ್ ಏಷ್ಯಾದ ನಿರ್ವಹಣಾ ವಿಭಾಗದ ಮುಖ್ಯಸ್ಥ ಮನೀಶ್ ಉಪ್ಪಲ್ ಮತ್ತು ವಿಮಾನ ಸುರಕ್ಷೆ ವಿಭಾಗದ ಮುಖ್ಯಸ್ಥ ಮುಕೇಶ್ ನೆಮಾ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಈಗ ಇಬ್ಬರನ್ನು ಅಮಾನತುಪಡಿಸಲು ತೀರ್ಮಾನಿಸಲಾಗಿದೆ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಕುತಿಯ ಪ್ರತಿಕ್ರಿಯೆಗೆ ಏರ್ ಏಷ್ಯಾ ಇಂಡಿಯಾದ ಅಧಿಕಾರಿಗಳು ಲಭ್ಯರಾಗಲಿಲ್ಲ. ‘ಯೂಟ್ಯೂಬರ್’ ಕ್ಯಾಫ್ಟನ್ ಗೌರವ್ ತನೇಜಾ ಅವರು ಜೂನ್ 14ರಂದು ಟ್ವೀಟ್ ಮಾಡಿ, ಸುರಕ್ಷತಾ ಕ್ರಮಗಳ ಬಗ್ಗೆ ದನಿ ಎತ್ತಿದಕ್ಕೆ ನನ್ನನ್ನು ಅಮಾನತುಪಡಿಸಲಾಗಿದೆ ಎಂದು ದೂರಿದ್ದರು. ಸುರಕ್ಷತೆ ಕುರಿತಂತೆ ಅವರು ಜೂನ್ 15ರಂದು ವಿಡಿಯೊ ಪೋಸ್ಟ್ ಮಾಡಿದ್ದರು.ಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.