ಚೆನ್ನೈ: ಚೆನ್ನೈನಲ್ಲಿರುವ ಅಮೇರಿಕಾ ದೂತವಾಸವು ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈನ ಅಮೇರಿಕಾ ದೂತಾವಾಸಗಳ ಸಮನ್ವಯದಲ್ಲಿ ಫೆಬ್ರವರಿ 11, ಶುಕ್ರವಾರದಂದು ಆಯೋಜಿಸಿರುವ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತೀಯ ಮೂಲದ ಅಮೇರಿಕನ್ ಹದಿಹರೆಯದ ಸಂಶೋಧಕಿ ಮತ್ತು ವಿಜ್ಞಾನಿ ಗೀತಾಂಜಲಿ ರಾವ್ ಅವರು ಭಾಗವಹಿಸಲಿದ್ದಾರೆ.
ಡಯಾಸ್ಪೊರಾ ಡಿಪ್ಲೊಮಸಿ ಸರಣಿಯಲ್ಲಿನ ಆರನೇ ಕಾರ್ಯಕ್ರಮ ವರ್ಚುವಲ್ ಆಗಿ ಫೆಬ್ರುವರಿ11, ಸಂಜೆ 6:45ಕ್ಕೆ ನಡೆಯಲಿದ್ದು, ಆಗ ಐದು ನಿಮಿಷಗಳ ಅವಧಿಯ 'ಸರ್ಚ್ ಆನ್: ಪಾಸಿಟಿವ್ ಕರೆಂಟ್' ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ರಾವ್ ಅವರ ಆವಿಷ್ಕಾರಗಳಲ್ಲಿ ಒಂದಾದ ನೀರಿನಲ್ಲಿ ಸೀಸದ ಮಾಲಿನ್ಯವನ್ನು ಪತ್ತೆಹಚ್ಚುವ ಮೊಬೈಲ್ ಸಾಧನದ ವಿವರ ಇದರಲ್ಲಿದೆ.
‘ವೈ ವೇಸ್ಟ್?‘ಎನ್‌ಜಿಒ ಸಂಸ್ಥಾಪಕಿ, ‘ವಾಟರ್ ಗರ್ಲ್ ಆಫ್ ಇಂಡಿಯಾ‘ಎಂದೇ ಹೆಸರಾಗಿರುವ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ಗರ್ವಿತಾ ಗುಲ್ಹಾಟಿ ಅವರು ಗೀತಾಂಜಲಿ ರಾವ್ ಅವರ ಸಂದರ್ಶನ ನಡೆಸಲಿದ್ದಾರೆ.
ಈ ಸಂವಾದದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಪ್ರೀತಿಯಿಟ್ಟುಕೊಂಡಿರುವ ಭಾರತೀಯ ಮೂಲದ ಅಮೆರಿಕನ್ ಎಂಬ ಗುರುತಿನಲ್ಲಿ ಬೆಳೆಯುವ ಪಯಣದ ಬಗ್ಗೆ ಮಾತನಾಡಲಿದ್ದಾರೆ. ಇದಲ್ಲದೆ STEM ಕಲಿತ ಹೆಣ್ಣು ಮಕ್ಕಳು ಹೇಗೆ ವಿಶ್ವವನ್ನು ಬದಲಿಸಬಲ್ಲರು ಎಂಬ ಕನಸನ್ನು ಹಂಚಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.