ADVERTISEMENT

Missile System: ನಿರ್ದೇಶಿತ ಕ್ಷಿಪಣಿ ಮಾರಾಟಕ್ಕೆ‌ ಅಮೆರಿಕ ಒಪ್ಪಿಗೆ

ಪಿಟಿಐ
Published 20 ನವೆಂಬರ್ 2025, 16:13 IST
Last Updated 20 ನವೆಂಬರ್ 2025, 16:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌/ ವಾಷಿಂಗ್ಟನ್‌: 93 ಮಿಲಿಯನ್‌ ಡಾಲರ್(₹824 ಕೋಟಿ) ಮೌಲ್ಯದ ನಿರ್ದೇಶಿತ ಫಿರಂಗಿ ಹಾಗೂ  ಜಾವೆಲಿನ್ ಟ್ಯಾಂಕ್‌ ವಿರೋಧಿ ಕ್ಷಿಪಣಿ ವ್ಯವಸ್ಥೆ ಹಾಗೂ ಇದಕ್ಕೆ ಸಂಬಂಧಿಸಿದ ಉಪಕರಣಗಳ ಮಾರಾಟಕ್ಕೆ ಅಮೆರಿಕ ಸರ್ಕಾರವು ಒಪ್ಪಿಗೆ ನೀಡಿದೆ. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಶಕ್ತಿ ಬಲವರ್ಧನೆಯಾಗಲಿದ್ದು, ಪ್ರಾದೇಶಿಕ ಅಪಾಯಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.

ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದ್ದ ಭಾರತದ ನಿರ್ಧಾರದ ವಿರುದ್ಧ ಕಿಡಿಕಾರಿದ್ದ ಅಮೆರಿಕ, ಭಾರತದಿಂದ ರಫ್ತು ಮಾಡುತ್ತಿದ್ದ ಉತ್ಪನ್ನಗಳ ಮೇಲೆ ಶೇಕಡ 50ರಷ್ಟು ಸುಂಕ ಹೇರಿತ್ತು. ಈ ಬೆಳವಣಿಗೆ ಬಳಿಕ ಅಮೆರಿಕ–ಭಾರತ ಮಧ್ಯೆ ನಡೆದ ಅತಿ ದೊಡ್ಡ ರಕ್ಷಣಾ ಉಪಕರಣಗಳ ಖರೀದಿ ವ್ಯವಹಾರವಾಗಿದೆ.

ಈ ಒಪ್ಪಂದಕ್ಕೆ ಅಗತ್ಯವಿರುವ ಪ್ರಮಾಣಪತ್ರಗಳನ್ನು ಅಮೆರಿಕ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಕಳುಹಿಸಿದೆ ಎಂದು ಅಮೆರಿಕದ ಸಂಸತ್‌ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.