ಕೋಲ್ಕತ್ತ: ಅಂಗವಿಕಲರ ಹಕ್ಕುಗಳ ಹೋರಾಟಗಾರ ಅರ್ಮಾನ್ ಅಲಿ ಅವರು ಅಮೆರಿಕದ ವೃತ್ತಿಪರ ವಿನಿಮಯ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇಂಟರ್ನ್ಯಾಷನಲ್ ವಿಸಿಟರ್ ಲೀಡರ್ಶಿಪ್ ಪ್ರೋಗ್ರಾಮ್ನಲ್ಲಿ ಅರ್ಮಾನ್ ಅಲಿ ಭಾಗವಹಿಸಲಿದ್ದಾರೆ.ಕೋವಿಡ್ನಿಂದಾಗಿ ಈ ಬಾರಿಯ ಕಾರ್ಯಕ್ರಮವು ವರ್ಚುವಲ್ ವೇದಿಕೆಯ ಮೂಲಕ ನಡೆಯಲಿದೆ ಎಂದು ಅಮೆರಿಕದ ಕಾನ್ಸುಲೇಟ್ ಕಚೇರಿಯ ಪ್ರಕಟಣೆ ತಿಳಿಸಿದೆ.
ಅಮೆರಿಕದ ಅಂಗವಿಕಲರ ಕಾಯ್ದೆಯ 30ನೇ ವಾರ್ಷಿಕೋತ್ಸವ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಲೆಬನಾನ್ ರಾಷ್ಟ್ರದ ಫದಿ ಅಲ್ ಹಲಾಬಿ ಮತ್ತು ನೈಜೀರಿಯಾದ ಡೇವಿಡ್ ಅನೆಯೆಲ್ ಭಾಗವಹಿಸಲಿದ್ದಾರೆ. ಅಲ್ಲದೆ ಬೇರೆ ಬೇರೆ ರಾಷ್ಟ್ರಗಳ ಪ್ರತಿನಿಧಿಗಳು ಆನ್ಲೈನ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.