ADVERTISEMENT

ದಿಶಾ ಸಾಲಿಯಾನ್‌ ಸಾವು ಆತ್ಮಹತ್ಯೆ; ಪೊಲೀಸರಿಂದ ಪ್ರಮಾಣಪತ್ರ ಸಲ್ಲಿಕೆ

ಮುಂಬೈ ಹೈಕೋರ್ಟ್‌ಗೆ ಪೊಲೀಸರಿಂದ ಪ್ರಮಾಣಪತ್ರ ಸಲ್ಲಿಕೆ

ಪಿಟಿಐ
Published 3 ಜುಲೈ 2025, 13:35 IST
Last Updated 3 ಜುಲೈ 2025, 13:35 IST
<div class="paragraphs"><p>ದಿಶಾ ಸಾಲಿಯಾನ್‌</p></div>

ದಿಶಾ ಸಾಲಿಯಾನ್‌

   

ಮುಂಬೈ: ‘ಸೆಲೆಬ್ರಿಟಿಗಳ ಮಾಜಿ ವ್ಯವಸ್ಥಾಪಕಿಯಾಗಿದ್ದ ದಿಶಾ ಸಾಲಿಯಾನ್‌ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ. ಅವರ ಸಾವಿನಲ್ಲಿ ಯಾವುದೇ ದುಷ್ಕೃತ್ಯ ನಡೆದಿಲ್ಲ’ ಎಂದು ಮುಂಬೈ ಪೊಲೀಸರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ.

ಮಗಳು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ದಿಶಾ ಸಾಲಿಯಾನ್‌ ಅವರ ತಂದೆ ಸತೀಶ್‌ ಸಾಲಿಯಾನ್‌ ಪುನರುಚ್ಚರಿಸಿದ್ದಾರೆ.  

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌. ಗಡ್ಕರಿ ನೇತೃತ್ವದ ಪೀಠವು ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿತು. 

‘ದಿಶಾ ಸಾಲಿಯಾನ್‌ 2020ರ ಜೂನ್‌ 8ರಂದು ಮುಂಬೈನ ಮಾಲಾಡ್‌ ಪ್ರದೇಶದಲ್ಲಿರುವ ತಮ್ಮ ಫ್ಲ್ಯಾಟ್‌ನ 14ನೇ ಮಹಡಿಯ ಕಿಟಕಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ದೇಹದ ಮೇಲೆ ದೈಹಿಕ ಹಲ್ಲೆ ನಡೆದಿರುವ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿಲ್ಲ. ತಮ್ಮ ಕುಟುಂಬದೊಂದಿಗಿನ ವ್ಯಾಜ್ಯದಿಂದಾಗಿ ಅವರು ವಿಪರೀತ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು’  ಎಂಬ ಅಂಶವೂ ಮುಂಬೈ  ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿದೆ.   

ಮಗಳ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಸತೀಶ್‌ ಸಾಲಿಯಾನ್‌ ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.