ADVERTISEMENT

ಕಮಲಾ ಹ್ಯಾರಿಸ್ ನಿವಾಸದಲ್ಲಿ ದೀಪಾವಳಿ

ಪಿಟಿಐ
Published 22 ಅಕ್ಟೋಬರ್ 2022, 14:42 IST
Last Updated 22 ಅಕ್ಟೋಬರ್ 2022, 14:42 IST

ವಾಷಿಂಗ್ಟನ್: ದೀಪಾವಳಿ ಹಬ್ಬವು ಸಂಸ್ಕೃತಿಗಳನ್ನು ಮೀರಿದ ಸಾರ್ವತ್ರಿಕ ಪರಿಕಲ್ಪನೆಯಾಗಿದೆ ಎಂದು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಶುಕ್ರವಾರ ಹೇಳಿದ್ದಾರೆ.

ತಮ್ಮ ಅಧಿಕೃತ ನಿವಾಸದಲ್ಲಿ ಭಾರತೀಯ ಅಮೆರಿಕನ್ನರ ಜತೆ ಅವರು ಬೆಳಕಿನ ಹಬ್ಬ ಆಚರಿಸುವುದರಲ್ಲಿ ತೊಡಗಿದ್ದಾರೆ. ದೀಪಗಳು ಮತ್ತು ಮಣ್ಣಿನ ದೀಪಗಳಿಂದ ಅವರ ನಿವಾಸವನ್ನು ಅಲಂಕರಿಸಲಾಗಿದೆ. ಅತಿಥಿಗಳಿಗೆ ಸಾಂಪ್ರದಾಯಿಕ ಸಿಹಿ ತಿನಿಸುಗಳು, ಭಾರತೀಯ ಭಕ್ಷ್ಯಗಳನ್ನು ನೀಡಲಾಗುತ್ತಿದೆ.

ಈ ವೇಳೆ ನೂರಾರು ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಕಮಲಾ ಹ್ಯಾರಿಸ್, ‘ದೀಪಾವಳಿ ಹಬ್ಬವು ಕತ್ತಲೆಯ ಕ್ಷಣಗಳಲ್ಲಿ ಬೆಳಕು ತರುವ ಶಕ್ತಿಯ ಮಹತ್ವವನ್ನು ನೆನಪಿಸುವ ಕ್ಷಣಗಳಾಗಿವೆ’ ಎಂದು ಹೇಳಿದರು.

ADVERTISEMENT

ದೇಶದ ವಿವಿಧ ಭಾಗಗಳಿಂದ ಬಂದಿದ್ದ ಅತಿಥಿಗಳಿಗೆ ಕಮಲಾ ಅವರು ದೀಪಾವಳಿ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.