ಚೆನ್ನೈ: ’ಗೂಂಡಾಗಿರಿ ಎನ್ನುವುದು ಡಿಎಂಕೆಯ ರಾಜಕೀಯ ಸಂಸ್ಕೃತಿಯಾಗಿದೆ’ ಎಂದು ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಕಿಡಿಕಾರಿದ್ದಾರೆ.
ತಮ್ಮ ನಿವಾಸದ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯ ಮೇಲೆ ಡಿಎಂಕೆ ತಿರುವರೂರು ವಾರ್ಡ್ ಕೌನ್ಸಿಲರ್ ಪುರುಷೋತ್ತಮನ್ ಮತ್ತು ಆತನ ಸಂಗಡಿಗರು ಹಲ್ಲೆ ನಡೆಸಿದ ವಿಡಿಯೊವನ್ನು ಅಣ್ಣಾಮಲೈ ಹಂಚಿಕೊಂಡಿದ್ದಾರೆ.
‘ಸಚಿವರಿಂದ ಹಿಡಿದು ಕೌನ್ಸಿಲರ್‌ಗಳವರೆಗೆ ‘ಗೂಂಡಾಗಿರಿ’ಯೇ ಡಿಎಂಕೆಯ ರಾಜಕೀಯ ಸಂಸ್ಕೃತಿಯಾಗಿದೆ. ಗೂಂಡಾಗಿರಿ ಮತ್ತು ಹಿಂಸಾಚಾರದ ಮೇಲೆ ನಿಂತಿರುವ ಡಿಎಂಕೆ ಪಕ್ಷವು ಕ್ಷಮೆಯಾಚನೆ ಎಂಬ ಸುಳ್ಳಿನ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಡಿಎಂಕೆಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.