ADVERTISEMENT

ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಕಾಂಗ್ರೆಸ್‌ನಿಂದ ಪ್ರತಿಭಟನೆ

ಪಿಟಿಐ
Published 29 ಆಗಸ್ಟ್ 2024, 11:38 IST
Last Updated 29 ಆಗಸ್ಟ್ 2024, 11:38 IST
<div class="paragraphs"><p>ಅಧೀರ್ ಚೌಧರಿ ನೇತೃತ್ವದಲ್ಲಿ ರ್‍ಯಾಲಿ</p></div>

ಅಧೀರ್ ಚೌಧರಿ ನೇತೃತ್ವದಲ್ಲಿ ರ್‍ಯಾಲಿ

   

(ಚಿತ್ರ ಕೃಪೆ–@PTI_News)

ಕೋಲ್ಕತ್ತ: ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಕಾಂಗ್ರೆಸ್ ಗುರುವಾರ ಕೋಲ್ಕತ್ತದಲ್ಲಿ ಪ್ರತಿಭಟನಾ ರ್‍ಯಾಲಿಯನ್ನು ಆಯೋಜಿಸಿತ್ತು.

ADVERTISEMENT

ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ಪ್ರಕರಣದ ‌ವಿರುದ್ಧ ಹಲವಾರು ನಾಗರಿಕ ಸಮಾಜ ಸಂಘಟನೆಗಳು ಸಹ ನಗರದಲ್ಲಿ ಬೀದಿಗಿಳಿದ್ದವು.

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಧೀರ್ ಚೌಧರಿ ನೇತೃತ್ವದಲ್ಲಿ ನಡೆದ ರ್‍ಯಾಲಿಯು ಕಾಲೇಜು ಸ್ಕ್ವೇರ್‌ನಿಂದ ಪ್ರಾರಂಭವಾಗಿ ಉತ್ತರ ಕೋಲ್ಕತ್ತದ ಶ್ಯಾಂಬಜಾರ್ ಪೈವ್‌ ಪಾಯಿಂಟ್ ಕ್ರಾಸಿಂಗ್‌ನ ಕಡೆಗೆ ಸಾಗಿತು.

ಮತ್ತೊಂದು ರ್‍ಯಾಲಿಯಲ್ಲಿ ಭಾಗವಹಿಸಿದ ನೂರಾರು ಮಹಿಳೆಯರು ಕೋಲ್ಕತ್ತದ ಬೀದಿಗಳಲ್ಲಿ 'ಅಂಗೀಕರ್ ಜಾತ್ರೆ' ಅಥವಾ 'ಪ್ರತಿಜ್ಞಾ ಯಾತ್ರೆ' ನಡೆಸಿದರು. ಘೋಷಣಾ ಫಲಕಗಳು ಮತ್ತು ಬ್ಯಾನರ್‌ಗಳನ್ನು ಹಿಡಿದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ, ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪಥೇರ್ ದಾಬಿ ಹೆಸರಿನಲ್ಲಿ ಮತ್ತೊಂದು ರ್‍ಯಾಲಿಯನ್ನು ಆಯೋಜಿಸಲಾಗಿತ್ತು. ‌ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.