ADVERTISEMENT

ನವಜಾತ ಶಿಶುವಿನಲ್ಲೂ ಕಂಡು ಬಂದ ಕಪ್ಪು ಶಿಲೀಂಧ್ರ: ಯಶಸ್ವಿ ಚಿಕಿತ್ಸೆ

ಆಗ್ರಾದ ಆಸ್ಪತ್ರೆಯಲ್ಲಿ ಘಟನೆ

ಪಿಟಿಐ
Published 7 ಜೂನ್ 2021, 14:43 IST
Last Updated 7 ಜೂನ್ 2021, 14:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಆಗ್ರಾ: ಇಲ್ಲಿನ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದರಲ್ಲಿ ಕಪ್ಪು ಶಿಲೀಂಧ್ರದ ಸೋಂಕು(ಬ್ಲ್ಯಾಕ್ ಫಂಗಸ್) ಕಂಡು ಬಂದಿರುವುದು ವರದಿಯಾಗಿದೆ.

14 ವರ್ಷದ ಹೆಣ್ಣುಮಗುವನ್ನು ಕಡಿಮೆ ತೂಕ ಹಾಗೂ ಅನಾರೋಗ್ಯದ ಕಾರಣದಿಂದ ಜನನವಾದ ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಮಗುವಿನ ಗಲ್ಲದ ಮೇಲೆ ಕಪ್ಪು ಶಿಲೀಂಧ್ರ ಸೋಂಕಿನ ಲಕ್ಷಣ ಕಂಡು ಬಂದಿದ್ದರಿಂದ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಗುಣಮುಖ ಮಾಡಿದ್ದೇವೆ ಎಂದು ಆಸ್ಪತ್ರೆಯ ವೈದ್ಯ ಅಖಿಲೇಶ್ ಪ್ರತಾಪ್ ಸಿಂಗ್ ಅವರು ತಿಳಿಸಿದ್ದಾರೆ.

ಮಗು ಅಪಾಯದಿಂದ ಪಾರಾಗಿದೆ. ಐಸಿಯುನಿಂದ ಸಾಮಾನ್ಯ ಹಾಸಿಗೆಗೆಸ್ಥಳಾಂತರವಾಗಿದ್ದು ನಿಗಾದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ವಿಶೇಷವೆಂದರೆ ಇದೇ ಆಸ್ಪತ್ರೆಯಲ್ಲಿ 5 ಜನ ಕಪ್ಪು ಶಿಲೀಂಧ್ರ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ ಒಬ್ಬ ಮೃತಪಟ್ಟಿದ್ದಾನೆ ಎಂದು ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.