ಜಾಮಾನಗರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಗುಜರಾತ್‌ನ ಜಾಮಾನಗರದಲ್ಲಿ ಉದ್ಯಮಿ ಅನಂತ್ ಅಂಬಾನಿ ಸ್ಥಾಪಿಸಿರುವ ಅತ್ಯಾಧುನಿಕ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ‘ವಂತಾರಾ’ಕ್ಕೆ ಭೇಟಿ ನೀಡಿದ್ದಾರೆ.
ಮೂಲಗಳ ಪ್ರಕಾರ, ಅಂಬಾನಿ ಕುಟುಂಬದ ಆಹ್ವಾನದ ಮೇರೆಗೆ ಡೊನಾಲ್ಡ್ ಟ್ರಂಪ್ ಜೂನಿಯರ್ ವಂತಾರಾಗೆ ಭೇಟಿ ನೀಡಿದ್ದಾರೆ. ಅನಂತ್ ಅಂಬಾನಿ ಅವರೊಂದಿಗೆ ವಿಸ್ತಾರವಾದ ವನ್ಯಜೀವಿ ಕೇಂದ್ರವನ್ನು ಸುತ್ತಾಡಿದ್ದಾರೆ. ಜತೆಗೆ ಜಾಮಾನಗರದಲ್ಲಿನ ಕೆಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಜಾಮಾನಗರಕ್ಕೆ ಬರುವ ಮುನ್ನ ಟ್ರಂಪ್ ಪುತ್ರ, ಆಗ್ರಾದಲ್ಲಿರುವ ತಾಜ್‌ಮಹಲ್‌ಗೆ ಭೇಟಿ ಕೊಟ್ಟಿದ್ದರು.
ಗುರುವಾರ ಗುಜರಾತ್‌ಗೆ ಬಂದಿಳಿದ ಟ್ರಂಪ್ ಪುತ್ರ, ಅಂಬಾನಿ ಮನೆಗೆ ಭೇಟಿ ನೀಡಿದ್ದಾರೆ. ಟ್ರಂಪ್ ಜೂನಿಯರ್ ತನ್ನ ಗೆಳತಿಯೊಂದಿಗೆ ಸಾಂಪ್ರದಾಯಿಕ ಗರ್ಬಾ-ದಾಂಡಿಯಾ ನೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಇದರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.