ADVERTISEMENT

ಕೋವಿಡ್ ಲಸಿಕೆ ಬಂದಿಲ್ಲ: ನಾಳೆ ಲಸಿಕಾ ಕೇಂದ್ರಗಳ ಮುಂದೆ ನಿಲ್ಲಬೇಡಿ- ಕೇಜ್ರಿವಾಲ್

18 ರಿಂದ 44 ವರ್ಷದೊಳಗಿನ ದೆಹಲಿಯ ನಾಗರಿಕರಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನವಿ

ಪಿಟಿಐ
Published 30 ಏಪ್ರಿಲ್ 2021, 8:37 IST
Last Updated 30 ಏಪ್ರಿಲ್ 2021, 8:37 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ‘ನಮಗಿನ್ನೂ ಅಗತ್ಯ ಕೋವಿಡ್‌ ಲಸಿಕೆಗಳು ಪೂರೈಕೆಯಾಗದ ಕಾರಣ ಮೇ 1 ರಿಂದ ಕೋವಿಡ್‌ ಲಸಿಕೆ ಕೇಂದ್ರಗಳ ಹೊರಗೆ ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲದಂತೆ 18-44 ವಯಸ್ಸಿನ ಜನರಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಆನ್‌ಲೈನ್ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ‘ಮುಂದಿನ ಒಂದೆರಡು ದಿನಗಳಲ್ಲಿ 3 ಲಕ್ಷ ಕೋವಿಶೀಲ್ಡ್‌ ಲಸಿಕೆಗಳು ಬರಲಿದ್ದು, ಅವುಗಳು ಬಂದ ನಂತರ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಲಾಗುತ್ತದೆ‘ ಎಂದು ಅವರು ಸ್ಪಷ್ಟಪಡಿಸಿದರು.

ನಿಗದಿಯಂತೆ ಮೇ 1 ರಿಂದ 18 ರಿಂದ 44 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ನೀಡುವ ಮೂರನೇ ಹಂತದ ಅಭಿಯಾನ ದೇಶದಾದ್ಯಂತ ಆರಂಭವಾಗಲಿದೆ. ದೆಹಲಿ ಸೇರಿದಂತೆ ಕೆಲವು ರಾಜ್ಯಗಳಿಗೆ ಲಸಿಕೆ ಪೂರೈಕೆಯಾಗದ ಕಾರಣ, ಆ ರಾಜ್ಯಗಳಲ್ಲಿ ಮೂರನೇ ಹಂತದ ಲಸಿಕಾ ಅಭಿಯಾನವನ್ನು ಮುಂದೂಡಲಾಗಿದೆ.

ADVERTISEMENT

‘ಈ ಮೂರು ತಿಂಗಳಲ್ಲಿ ನಮ್ಮ ಸರ್ಕಾರ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ ಲಸಿಕೆಗಳ ತಲಾ 67 ಲಕ್ಷ ಡೋಸ್‌ಗಳಿಗಾಗಿ ಬೇಡಿಕೆ ಸಲ್ಲಿಸಿದೆ. ಅಗತ್ಯವಿರುವಷ್ಟು ಲಸಿಕೆಗಳು ಪೂರೈಕೆಯಾದರೆ, ಮುಂದಿನ ಮೂರು ತಿಂಗಳೊಳಗೆ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಗುರಿ ಹೊಂದಿದ್ದೇವೆ‘ ಎಂದು ಕೇಜ್ರಿವಾಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.