ADVERTISEMENT

ತೇಜಸ್ ಪೈಲಟ್‌ಗಳಿಗೆ ಪರಿಣಾಮಕಾರಿ ಜೀವ ರಕ್ಷಕ ಸಾಧನ

ಡಿಆರ್‌ಡಿಒದಿಂದ ಅತ್ಯಂತ ಎತ್ತರ ಪ್ರದೇಶದಲ್ಲಿ ಪ್ರಯೋಗ

ಪಿಟಿಐ
Published 5 ಮಾರ್ಚ್ 2025, 12:59 IST
Last Updated 5 ಮಾರ್ಚ್ 2025, 12:59 IST
ತೇಜಸ್ ವಿಮಾನ
ತೇಜಸ್ ವಿಮಾನ   

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು(ಡಿಆರ್‌ಡಿಓ) ತೇಜಸ್ ಲಘು ಯುದ್ಧ ವಿಮಾನದ ಪೈಲಟ್‌ಗಳಿಗೆ ಭೂ ಮಟ್ಟದಿಂದ ಅತೀ ಎತ್ತರದಲ್ಲಿ ಜೀವರಕ್ಷಕವಾಗಬಲ್ಲ ಆಮ್ಲಜನಕ ವ್ಯವಸ್ಥೆಯನ್ನು ಮಂಗಳವಾರ ಪ್ರಯೋಗ ಮಾಡಿದೆ.

ವಿಮಾನವು ಚಾಲನೆಯಲ್ಲಿರುವ ಸಂದರ್ಭದಲ್ಲಿ ಆಮ್ಲಜನಕವನ್ನು ಉತ್ಪತ್ತಿ ಮಾಡಿ ಪೂರೈಸುವ ರೀತಿಯಲ್ಲಿ ಜೀವರಕ್ಷಕ ಸಾಧನವನ್ನು ವಿನ್ಯಾಸಗೊಳಿಸಿದ್ದು, ಸಾಂಪ್ರದಾಯಿಕ ಆಮ್ಲಜನಕ ಸಿಲಿಂಡರ್ ಅವಲಂಬನೆಯನ್ನು ತಪ್ಪಿಸುವ ಅತ್ಯಂತ ಪರಿಣಾಮಕಾರಿ ವ್ಯವಸ್ಥೆ ಇದಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT