ಪ್ರಾತಿನಿಧಿಕ ಚಿತ್ರ
ನವದೆಹಲಿ: ಸಶಸ್ತ್ರ ಪಡೆಗಳು ತಮ್ಮ ಡ್ರೋನ್‌ಗಳು ಮತ್ತು ಡ್ರೋನ್ ಪ್ರತಿರೋಧಕ ವ್ಯವಸ್ಥೆಗಳ ಸಾಮರ್ಥ್ಯ ಪರೀಕ್ಷೆಯನ್ನು ಅಕ್ಟೋಬರ್ ಮೊದಲ ವಾರದಲ್ಲಿ ಹಮ್ಮಿಕೊಂಡಿರುವ ಸಮರಾಭ್ಯಾಸದ ವೇಳೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಅಕ್ಟೋಬರ್ 6–10ರವರೆಗೆ ಮಧ್ಯಪ್ರದೇಶದಲ್ಲಿ ‘ಕೇಂದ್ರ ಕಚೇರಿಯ ಸಮಗ್ರ ರಕ್ಷಣಾ ಸಿಬ್ಬಂದಿ’ಯು (ಎಚ್‌ಕ್ಯೂ–ಐಡಿಎಸ್) ಈ ಸಮರಾಭ್ಯಾಸವನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಾಯು ರಕ್ಷಣಾ ವ್ಯವಸ್ಥೆಗಳ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಏರ್ ಮಾರ್ಷಲ್ ರಾಕೇಶ್ ಸಿನ್ಹಾ, ಆಪರೇಷನ್ ಸಿಂಧೂರದಿಂದ ಕಲಿತ ಪಾಠಗಳು ಮತ್ತು ಮಿಲಿಟರಿ ಚಿಂತನೆ ಹಾಗೂ ಯೋಜನೆಗಳಲ್ಲಿ ಎದುರಾಳಿಗಿಂತ ಮುಂದೆ ಇರಬೇಕಾದ ಅಗತ್ಯದ ಬಗ್ಗೆ ಪ್ರತಿಪಾದಿಸಿದ್ದಾರೆ.
‘ಎಕ್ಸರ್‌ಸೈಸ್ ಕೋಲ್ಡ್ ಸ್ಟಾರ್ಟ್’ ಅನ್ನು ಕೇಂದ್ರ ವಲಯದಲ್ಲಿ ನಡೆಸಲಾಗುವುದು ಮತ್ತು ಮೂರು ಸೇನೆಗಳು ಅದರಲ್ಲಿ ಭಾಗವಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.