ADVERTISEMENT

ಗುಜರಾತ್: ನೌಕಾಪಡೆ ಪ‍್ರದೇಶ ಸಮೀಪ ಡ್ರೋನ್ ಹಾರಾಟ ನಿಷೇಧ

ಪಿಟಿಐ
Published 28 ಜುಲೈ 2021, 13:24 IST
Last Updated 28 ಜುಲೈ 2021, 13:24 IST
ಡ್ರೋನ್ (ಸಾಂದರ್ಭಿಕ ಚಿತ್ರ)
ಡ್ರೋನ್ (ಸಾಂದರ್ಭಿಕ ಚಿತ್ರ)   

ಅಹಮದಾಬಾದ್: ‘ಗುಜರಾತ್‌ನ ನೌಕಾಪಡೆ ಪ್ರದೇಶದ ಸುತ್ತಲಿನ ಮೂರು ಕಿ.ಮೀ. ಪರಿಧಿಯ ಪ್ರದೇಶವನ್ನು ಹಾರಾಟ ರಹಿತ ಪ್ರದೇಶ (ನೋ ಫ್ಲೈ ಜೋನ್‌) ಎಂದು ಘೋಷಿಸಲಾಗಿದ್ದು, ಇಲ್ಲಿ ಪೂರ್ವಾನುಮತಿಯಿಲ್ಲದೆ ಡ್ರೋನ್ ಇಲ್ಲವೇ ಯುಎವಿಗಳ ಹಾರಾಟ ನಡೆಸುವಂತಿಲ್ಲ ಎಂದು ನೌಕಾಪಡೆ ಹೇಳಿದೆ.

ಒಂದು ವೇಳೆ ಹಾರಾಟ ನಡೆಸಿದರೆ ಅಂತಹ ಡ್ರೋನ್, ಯುಎವಿಗಳನ್ನು ವಶಪಡಿಸಿಕೊಳ್ಳಲಾಗುವುದು ಅಥವಾ ನಾಶಪಡಿಸಲಾಗುವುದು ಎಂದು ರಕ್ಷಣಾ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಒ) ಬುಧವಾರ ಹೇಳಿದ್ದಾರೆ.

‌‘ಯಾವುದೇ ವ್ಯಕ್ತಿಗಳು ಮತ್ತು ನಾಗರಿಕ ಏಜೆನ್ಸಿಗಳು ಯಾವುದೇ ಕಾರಣಕ್ಕೂ ಈ ವಲಯಗಳಲ್ಲಿ ಯಾವುದೇ ರೀತಿಯ ವೈಮಾನಿಕ ಡ್ರೋನ್‌ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ’ ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.