ADVERTISEMENT

ಗುಜರಾತ್‌ನಲ್ಲಿ ₹5,000 ಕೋಟಿ ಮೌಲ್ಯದ ಕೊಕೇನ್ ವಶ

ಪಿಟಿಐ
Published 13 ಅಕ್ಟೋಬರ್ 2024, 16:54 IST
Last Updated 13 ಅಕ್ಟೋಬರ್ 2024, 16:54 IST
<div class="paragraphs"><p> ಕೊಕೇನ್</p></div>

ಕೊಕೇನ್

   

ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿ ಪೊಲೀಸರು ಮತ್ತು ಗುಜರಾತ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಂದು(ಭಾನುವಾರ) ಗುಜರಾತ್‌ನ ಅಂಕಲೇಶ್ವರದಲ್ಲಿ ₹5,000 ಕೋಟಿ ಮೌಲ್ಯದ 518 ಕೆ.ಜಿ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಈ ಮೂಲಕ, 15 ದಿನಗಳಲ್ಲಿ ದೆಹಲಿ ಮತ್ತು ಗುಜರಾತ್‌ನಲ್ಲಿ ಕಾನೂನು ಜಾರಿ ಸಂಸ್ಥೆಗಳು ಒಟ್ಟು ₹13,000 ಕೋಟಿ ಮೌಲ್ಯದ 1,289 ಕೆ.ಜಿ ಕೊಕೇನ್ ಮತ್ತು 40 ಕೆ.ಜಿಯಷ್ಟು ಹೈಡ್ರೋಪೋನಿಕ್ ಥಾಯ್ಲೆಂಡ್ ಗಾಂಜಾವನ್ನು ವಶಪಡಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಪೊಲೀಸರ ವಿಶೇಷ ದಳ ಮತ್ತು ಗುಜರಾತ್ ಪೊಲೀಸರು ಅಂಕಲೇಶ್ವರದ ಔಷಧ ಕಂಪನಿಯೊಂದರಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ 518 ಕೆ.ಜಿಯಷ್ಟು ಕೊಕೇನ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ವಶಪಡಿಸಿಕೊಂಡ ಕೊಕೇನ್‌ನ ಮೌಲ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ₹5,000 ಕೋಟಿ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 1ರಂದು ದೆಹಲಿಯ ಮಹಿಪಾಲ್‌ಪುರದಲ್ಲಿರುವ ಗೋದಾಮಿನ ಮೇಲೆ ವಿಶೇಷ ತನಿಖಾ ತಂಡವು ದಾಳಿ ನಡೆಸಿ 562 ಕೆ.ಜಿ ಕೊಕೇನ್ ಮತ್ತು 40 ಕೆ.ಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿತ್ತು.

ತನಿಖೆ ಮುಂದುವರಿದಂತೆ ಅಕ್ಟೋಬರ್ 10ರಂದು ದೆಹಲಿಯ ರಮೇಶ್ ನಗರದಲ್ಲಿನ ಅಂಗಡಿಯೊಂದರಿಂದ ಸುಮಾರು 208 ಕೆ.ಜಿ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಮಾದಕ ವಸ್ತು ಅಂಕಲೇಶ್ವರ ಮೂಲದ ಫಾರ್ಮಾಸ್ಯುಟಿಕಲ್ ಸಂಸ್ಥೆಯಿಂದ ಸರಬರಾಜಾಗಿದ್ದನ್ನು ಪೊಲೀಸರು ಪತ್ತೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.