ADVERTISEMENT

ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಅಂದಾಜು ₹ 500 ಕೋಟಿ ಮೌಲ್ಯದ ಮಾದಕವಸ್ತು ವಶ

ಪಿಟಿಐ
Published 7 ಡಿಸೆಂಬರ್ 2021, 14:27 IST
Last Updated 7 ಡಿಸೆಂಬರ್ 2021, 14:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಣಿಪುರದ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಅಂದಾಜು ₹ 500 ಕೋಟಿ ಮೌಲ್ಯದ ಮಾದಕವಸ್ತುವನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಮಣಿಪುರದ ಮೊರೆ ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮ್ಯಾನ್ಮಾರ್ ಮೂಲದ ಮಾದಕವಸ್ತು ಕಳ್ಳಸಾಗಣಿಕೆದಾರನನ್ನು ಭದ್ರತಾ ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ.

ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಕುರಿತು ಗುಪ್ತಚರ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಭಾರತ-ಮ್ಯಾನ್ಮಾರ್ ಗಡಿಯಲ್ಲಿನ ಅಸ್ಸಾಂ ರೈಫಲ್ಸ್ ಕಾರ್ಯಾಚರಣೆ ಕೈಗೊಂಡಿತ್ತು ಎಂದು ಪ್ಯಾರಾಮಿಲಿಟರಿ ಪಡೆ ತಿಳಿಸಿದೆ.

ADVERTISEMENT

ಕಾರ್ಯಾಚರಣೆಯಲ್ಲಿ 54 ಕೆ.ಜಿ. ಬ್ರೌನ್ ಶುಗರ್ ಮತ್ತು ಐಸ್ ಅಥವಾ ಕ್ರಿಸ್ಟಾಲ್ ಮೆಥ್ ಎಂದು ಕರೆಯಲಾಗುವ 154 ಕೆ.ಜಿ. ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ₹ 500 ಕೋಟಿ ಎಂದು ಹೇಳಿಕೆಯಲ್ಲಿ ತಿಳಿಸಿದೆ.

'ನಾರ್ಕೋ-ಭಯೋತ್ಪಾದನೆಯು ಮ್ಯಾನ್ಮಾರ್ ಮೂಲದ ಭಾರತದ ಉಗ್ರ ಸಂಘಟನೆಗಳಿಗೆ ಹಣಕಾಸಿನ ಪ್ರಮುಖ ಮೂಲವಾಗಿದೆ. ಭಾರತದಲ್ಲಿ ಯುವಜನರಲ್ಲಿ, ಮುಖ್ಯವಾಗಿ ಈಶಾನ್ಯ ಭಾಗದಲ್ಲಿ ಮಾದಕವಸ್ತುವಿನ ಚಟ ಏರಿಕೆಯಾಗುತ್ತಿರುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಅಷ್ಟಲ್ಲದೆ ಈ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೂ ಹಣಕಾಸಿನ ನೆರವು ನೀಡುತ್ತಿದೆ' ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.