
ನಮಾಂಶ್ ಸ್ಯಾಲ್
(ಪಿಟಿಐ ಚಿತ್ರ)
ನವದೆಹಲಿ: ದುಬೈ ಏರ್‌ಶೋ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) 'ತೇಜಸ್' ಪತನಗೊಂಡು ಮೃತಪಟ್ಟಿದ್ದ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಅವರಿಗೆ ದುಬೈ ಏರ್‌ಶೋ ಆಯೋಜಕರು ಗೌರವ ನಮನ ಸಲ್ಲಿಸಿದ್ದಾರೆ.
ಏರ್ ಶೋ ಅವಘಡದಲ್ಲಿ ನಮಾಂಶ್ ಸಾವಿಗೆ ತೀವ್ರ ದುಃಖ ವ್ಯಕ್ತಪಡಿಸಿರುವ ದುಬೈ ಏರ್‌ಶೋ ಆಯೋಜಕರು, ಸಂತಾಪವನ್ನು ಸೂಚಿಸಿದ್ದಾರೆ. ತಂಡದೊಂದಿಗೆ ಸಮಾಲೋಚಿದ ಬಳಿಕ ನಮಾಂಶ್ ಅವರಿಗೆ ವಾಯುಯಾನದ ಮೇಲಿನ ಉತ್ಸಾಹವನ್ನು ಪರಿಗಣಿಸಿ ವೈಮಾನಿಕ ಪ್ರದರ್ಶನವನ್ನು ಮುಂದುವರಿಸಲು ನಿರ್ಧರಿಸಲಾಯಿತು ಎಂದು ಹೇಳಿದೆ.
ವಿಂಗ್ ಕಮಾಂಡರ್ ಸ್ಯಾಲ್, ಈ ವರ್ಷದ ಪ್ರದರ್ಶನದ ಅವಿಭಾಜ್ಯ ಅಂಗವಾಗಿದ್ದರು. ತಮ್ಮ ಕೌಶಲ ಹಾಗೂ ಸಮರ್ಪಣೆಯಿಂದ ಮೆಚ್ಚುಗೆ ಗಳಿಸಿದ್ದರು ಎಂದು ತಿಳಿಸಿದೆ.
ನಮಾಂಶ್ ಅವರ ಕೊಡುಗೆಯನ್ನು ಸ್ಮರಿಸಲು, ಗೌರವ ಸೂಚಕವಾಗಿ ಶನಿವಾರದಂದು ಔಪಚಾರಿಕ ಪ್ರದರ್ಶನವನ್ನು ನಡೆಸಲಾಯಿತು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.