ADVERTISEMENT

ತಾಂತ್ರಿಕ ದೋಷ: ಬಾಂಗ್ಲಾದ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2025, 6:02 IST
Last Updated 20 ಫೆಬ್ರುವರಿ 2025, 6:02 IST
<div class="paragraphs"><p>ಬಿಮನ್ ಬಾಂಗ್ಲಾದೇಶ ಏರ್‌ಲೈನ್ಸ್‌ ವಿಮಾನ ತುರ್ತು ಭೂಸ್ಪರ್ಶ ಮಾಡಿರುವುದು.</p></div>

ಬಿಮನ್ ಬಾಂಗ್ಲಾದೇಶ ಏರ್‌ಲೈನ್ಸ್‌ ವಿಮಾನ ತುರ್ತು ಭೂಸ್ಪರ್ಶ ಮಾಡಿರುವುದು.

   

ಚಿತ್ರಕೃಪೆ: ಎಕ್ಸ್‌

ಮುಂಬೈ: ಢಾಕಾದಿಂದ ದುಬೈಗೆ 12 ಸಿಬ್ಬಂದಿ ಸೇರಿ 396 ಪ್ರಯಾಣಿಕರನ್ನು ಹೊತ್ತೊಯ್ಯತ್ತಿದ್ದ ಬಾಂಗ್ಲಾದೇಶದ ‘ಬಿಮನ್ ಬಾಂಗ್ಲಾದೇಶ್‌ ಏರ್‌ಲೈನ್ಸ್‌’ ವಿಮಾನವು ತಾಂತ್ರಿಕ ದೋಷದಿಂದ ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ತಡರಾತ್ರಿ 12 ಗಂಟೆ ಸುಮಾರಿಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಮಾನದ ಮಾರ್ಗ ಬದಲಿಸಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ‍ಪ್ರಯಾಣಿಕರ ಸುರಕ್ಷತೆ ಪರಿಗಣಿಸಿ ತಕ್ಷಣದ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ನಾಗ್ಪುರ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ಅಬಿದ್ ರೂಹಿ ತಿಳಿಸಿದ್ದಾರೆ.

ಪ್ರಯಾಣಿಕರನ್ನು ಅದೇ ಕಂಪನಿಯ ಮತ್ತೊಂದು ವಿಮಾನದಲ್ಲಿ ನಿಗದಿತ ಸ್ಥಳಕ್ಕೆ ತಲುಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.