ADVERTISEMENT

ದುಬೈ: ನಾಲ್ವರು ಮಹಿಳೆಯರ ರಕ್ಷಣೆ

ಪಿಟಿಐ
Published 29 ಜೂನ್ 2019, 19:08 IST
Last Updated 29 ಜೂನ್ 2019, 19:08 IST

ದುಬೈ: ದುಬೈಯಲ್ಲಿ ಬಲವಂತವಾಗಿ ಬಾರ್‌ಡಾನ್ಸರ್‌ಗಳಾಗಿ ಕೆಲಸ ಮಾಡುವಂತೆ ಒತ್ತಡ ಎದುರಿಸುತ್ತಿದ್ದ ನಾಲ್ವರು ಮಹಿಳೆಯರನ್ನು ಭಾರತೀಯ ರಾಯಭಾರಿಯ ಕಚೇರಿ ಸುಳಿವು ಆಧರಿಸಿ ದುಬೈ ಪೊಲೀಸರು ರಕ್ಷಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಮೂಲದಾ ನಾಲ್ವರು ಮಹಿಳೆಯರನ್ನು ಕಾರ್ಯಕ್ರಮ ನಿರ್ವಹಣೆ ಕಂಪನಿಯಲ್ಲಿ ಕೆಲಸ ಮಾಡುವಂತೆ ನಂಬಿಸಿ ಕರೆಸಿಕೊಳ್ಳಲಾಗಿತ್ತು. ದುಬೈ ತಲುಪಿದ ಕೂಡಲೇ ಅವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಬಾರ್‌ಗಳಲ್ಲಿ ನೃತ್ಯ ಮಾಡುತ್ತ ಗ್ರಾಹಕರನ್ನು ಸೆಳೆಯುವಂತೆ ಒತ್ತಡ ಹೇರಲಾಗಿತ್ತು ಎಂದು ದುಬೈಯಲ್ಲಿರುವ ಭಾರತೀಯ ಪ್ರಧಾನ ರಾಯಭಾರಿ ವಿಪುಲ್‌, ಗಲ್ಫ್‌ ನ್ಯೂಸ್‌ಗೆ ತಿಳಿಸಿದ್ದಾರೆ.

ಆದರೆ, ಒಬ್ಬ ಮಹಿಳೆ ತಾನು ತೊಂದರೆಯಲ್ಲಿರುವುದಾಗಿವಾಟ್ಸ್‌ಆಪ್‌ ಮೂಲಕ ತುರ್ತು ಸಂದೇಶ ಕಳಿಸುವಲ್ಲಿ ಯಶಸ್ವಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.